ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಕ್ರಮ ಮರಳು ಸಾಗಣೆ ಲಾರಿಗಳ ಮೇಲೆ ದಾಳಿ

Mainashree
Updated On : 20 Mar 2014, 12:09 pm

ಟಿ. ನರಸೀಪುರ: ತಾಲೂಕಿನ ವಿವಿಧೆಡೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 22 ಲಾರಿಗಳನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಶಪಡಿಸಿದ್ದಾರೆ.
ಕಾವೇರಿ ಮತ್ತು ಕಪಿಲಾ ನದಿಗಳ ಪಾತ್ರದಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಮಾಹಿತಿಯನ್ನಾಧರಿಸಿ ತಲಕಾಡು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಸ್. ಆನಂದ್ ನೇತೃತ್ವದಲ್ಲಿ ಆರಂಭವಾದ ಕಾರ್ಯಾಚರಣೆ ಚಂದಹಳ್ಳಿ ಚಾನಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ 5 ಲಾರಿ, ಒವರ್ ಲೋಡ್ ಮಾಡಿದ್ದ 6 ಲಾರಿ, ಪರ್ಮೀಟ್ ಇಲ್ಲದೆ ಇದ್ದ 6 ಲಾರಿ ಹಾಗೂ ಹೆಮ್ಮಿಗೆ ಬಳಿ 4 ಲಾರಿಗಳನ್ನು ವಶಪಡಿಸಿಕೊಂಡರು.
ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್‌ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಸಿ.ಬಿ. ರಾಜಣ್ಣ, ಪೇದೆಗಳಾದ ಮಂಚಗಯ್ಯ, ಸಿದ್ದರಾಜು, ಕೃಷ್ಣಯ್ಯ, ಕುಮಾರ, ರೈಟರ್ ಸಿದ್ದರಾಜು ಇದ್ದರು.
ನರಸೀಪುರದಲ್ಲಿ 6 ಲಾರಿ: ನರಸೀಪುರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 6 ಮರಳು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಚೌಹಳ್ಳಿ ಗೇಟ್‌ನಲ್ಲಿ 4 ಹಾಗೂ ನೀಲಸೋಗೆ ಬಳಿ 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement