ಎಪಿಎಂಸಿ ನಿರ್ದೇಶಕನ ವಿರುದ್ಧ ಬಂಡೆದ್ದ ಜನ
ಕೆ.ಆರ್. ನಗರ: ಎಪಿಎಂಸಿ ನಿರ್ದೇಶಕ ಬಂಡಹಳ್ಳಿ ಕುಚೇಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶಾಲಾ ವಿದ್ಯಾರ್ಥಿಗಳು ಪೋಷಕರೊಂದಿಗೆ ಮೌನ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಬಂಡಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಸುರೇಶ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲು ಮಾಡಿರುವುದರ ಜತೆಗೆ, ಕರ್ತವ್ಯ ನಿರತ ಶಿಕ್ಷಕರ ಮೇಲೆ ದೌರ್ಜನ್ಯ ಎಸಗಿರುವುದನ್ನು ವಿರೋಧಿಸಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿಯಿಂದ ವಿವಿ ರಸ್ತೆ, ಪುರಸಭಾ ವೃತ್ತದ ಮೂಲಕ ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿ ಆವರಣದಲ್ಲಿ ಕೆಲಹೊತ್ತು ಧರಣಿ ಕುಳಿತು, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಕುಚೇಲ ವಿರುದ್ಧ ಘೋಷಣೆ ಕೂಗಿ ಭಿತ್ತಿಪತ್ರ ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತಹಸೀಲ್ದಾರ್ ಶಿವಶಂಕರಪ್ಪ ಮನವಿ ಸ್ವೀಕರಿಸಿದರು. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಸ್‌ಡಿಎಂಸಿ ಅಧ್ಯಕ್ಷ ಎನ್.ಸ್ವಾಮಿ, ಸದಸ್ಯರಾದ ಲೋಕೇಶ್, ಪಾಪಯ್ಯ, ದೇವರಾಜು, ಕಾಳಯ್ಯ, ಚಿಕ್ಕಯ್ಯ, ಮಂಜುನಾಥ್, ನಂದೀಶ್, ಮಹದೇವ್, ಎನ್. ನಿಂಗರಾಜು, ಕಾಂತರಾಜು, ರಾಮಚಂದ್ರ, ಈರಯ್ಯ, ಸುಜಾತ ಭಾಗವಹಿಸಿದ್ದರು.