ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಮಿಕರಿಗೆ ಮತದಾನ ಜಾಗೃತಿ

Mainashree
Updated On : 20 Mar 2014, 12:00 pm

ಮೈಸೂರು: ಕಾರ್ಮಿಕರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮಾ.20 ರಿಂದ ಏ. 10 ರವರೆಗೆ ವಿವಿಧ ಕೈಗಾರಿಕಾ ಸಂಘಗಳಿಗೆ ಸ್ವೀಪ್ ಸಮಿತಿಯು ಭೇಟಿ ನೀಡಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಶಂಕರ್ ಹೇಳಿದ್ದಾರೆ.
ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಬುಧವಾರ ನಡೆದ ಸ್ವೀಪ್ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗುವಂತೆ ಮಾಡುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕಾಗುತ್ತದೆ. ಜಿಲ್ಲೆಯ ಎಲ್ಲ ಕೈಗಾರಿಕಾ ಸಂಘಗಳ ಆವರಣದಲ್ಲಿ ಸಭೆ ಸೇರಿ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿ ಹಾಗೂ ಪ್ರತಿಜ್ಞಾವಿಧಿ ಬೋಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾ.20ರ ಬೆಳಗ್ಗೆ 11ಕ್ಕೆ ಮೈಸೂರು ಕೈಗಾರಿಕೆಗಳ ಸಂಘ, ಮಾ.21ರ ಸಂಜೆ 4ಕ್ಕೆ ಮೈಸೂರು ಜಿಲ್ಲಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘ, ಮಾ.22ರ ಬೆಳಗ್ಗೆ 11ಕ್ಕೆ ವುಮೆನ್ ಇನ್ ಸ್ಮಾಲ್ ಎಂಟರ್‌ಪ್ರೈಸಸ್, ಮಾ.26ರ ಬೆಳಗ್ಗೆ 11ಕ್ಕೆ ಭಾರತೀಯ ಕೈಗಾರಿಕೆಗಳ ಒಕ್ಕೂಟ, ಮಾ.28ರಂದು ನಂಜನಗೂಡು ಕೈಗಾರಿಕಾ ಸಂಘ, ನಂಜನಗೂಡು ಕೈಗಾರಿಕಾ ಸಂಘ, ಕ್ಲಸ್ಟರ್‌ಗಳಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.  ಮಾ.29ರ ಬೆಳಗ್ಗೆ 11ಕ್ಕೆ ಹೆಬ್ಬಾಳ್ ಇಂಡಸ್ಟ್ರಿಯಲ್ ಎಸ್ಟೇಟ್ ಉತ್ಪಾದಕರ ಸಂಘ ಹಾಗೂ ಹೆಬ್ಬಾಳ್ ಕೈಗಾರಿಕಾ ವಸಾಹತು, ಮೇಟಗಳ್ಳಿ ಅಂಚೆ, ಏ.2ರ ಬೆಳಗ್ಗೆ 11ಕ್ಕೆ ಮೈಸೂರು ಸಣ್ಣ ಕೈಗಾರಿಕೆಗಳ ಉತ್ಪಾದಕರ ಸಂಘ, ಯಾದವಗಿರಿ ಕೈಗಾರಿಕಾ ವಸಾಹತು, ಏ.3ರ ಬೆಳಗ್ಗೆ 11ಕ್ಕೆ ಆಟೋ ಕ್ಲಸ್ಟರ್, ಮೈಸೂರು, ಏ. 4ರ ಬೆಳಗ್ಗೆ 11ಕ್ಕೆ ಪ್ರಿಂಟರ್ಸ್ ಕ್ಲಸ್ಟರ್, ಮೈಸೂರು, ಏ.10ರ ಬೆಳಗ್ಗೆ 11ಕ್ಕೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಹಾಗೂ ಜಿಲ್ಲೆಯ ಎಲ್ಲ  ಕೈಗಾರಿಕೆಗಳ ಸಂಘಗಳು, ಇವರೊಂದಿಗೆ ಸಭೆ ನಡೆಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಕೈಗಾರಿಕಾ ಸಂಘಗಳ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಘಟಕಗಳು ಅವರವರ ಕೈಗಾರಿಕಾ ಘಟಕಗಳಲ್ಲಿ ಎಲ್ಲ ಕಾರ್ಮಿಕರನ್ನು ಒಗ್ಗೂಡಿಸಿ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement