ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುರಿ ಇದ್ದರೆ ಮಾತ್ರ ಸಾಧನೆ

Mainashree
Updated On : 20 Mar 2014, 12:10 pm

ಹುಣಸೂರು: ಕೆಲಸಕ್ಕೆ ಸೇರುವ ಮಂದಿಗೆ ನಿರ್ದಿಷ್ಟ ಗುರಿ ಇದ್ದಲ್ಲಿ ಮಾತ್ರ ಅಂದುಕೊಂಡಿದ್ದನ್ನು ಗಳಿಸಲು ಸಾಧ್ಯ, ಇದಕ್ಕಾಗಿ ದಿನಪತ್ರಿಕೆಗಳನ್ನು ಸತತವಾಗಿ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಬಹುದೆಂದು ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಪುಟ್ಟಶೆಟ್ಟಿ ಹೇಳಿದರು.
ಪಟ್ಟಣದ ಜೀನಿಯಸ್ ಕೋಚಿಂಗ್ ಸೆಂಟರ್ ವತಿಯಿಂದ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತಂತೆ ತರಬೇತಿ ಶಿಬಿರ ಆಯೋಜಿಸುವ ಕುರಿತಂತೆ ಮಾಹಿತಿ ಸಭೆಯಲ್ಲಿ ಮಾತನಾಡಿದ ಅವರು ಯೋಗ, ಧ್ಯಾನದಂತಹ ಸಾಧನಗಳಿಂದ ಮಾನಸಿಕ ಸಮಚಿತ್ತವನ್ನು ಸಾಧಿಸುವಂತೆ ತಿಳಿಸಿದರು.
ಸಬ್ ಇನ್‌ಸ್ಪೆಕ್ಟರ್ ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಡಿ.ಡಿ. ಅರಸ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಆನಂದ್, ಮೈಸೂರಿನ ಮಹಾರಾಣಿ ಕಾಲೇಜಿನ ಉಪನ್ಯಾಸಕ ರವೀಂದ್ರ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಗೋಪಾಲಯ್ಯ, ಸಂಸ್ಥೆಯ ಮುಖ್ಯಸ್ಥ ಜಿ.ನಾಗರಾಜ್, ಹರೀಶ್, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement