ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಂದೆ ಕಾಡಲಿದೆ ಕಾಳುಗಳ ಕೊರತೆ

Mainashree
Updated On : 20 Mar 2014, 12:10 pm

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 19
ಮುಂದಿನ ದಿನಗಳಲ್ಲಿ ಯಾವುದೇ ದೇಶಗಳೂ ಕೂಡ ಕಾಳುಗಳನ್ನು ಉತ್ಪಾದಿಸುವಲ್ಲಿ ಶಕ್ತವಾಗಿರುವುದಿಲ್ಲ. ಯಾಕೆಂದರೆ, ಧಾನ್ಯಗಳನ್ನು ಸಂಗ್ರಹಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾನೂನು ತಜ್ಞರು, ರಾಜಕಾರಣಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಕೃಷಿ ವಿಜ್ಞಾನಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಂ. ಮಹದೇವಪ್ಪ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ವಿಜ್ಞಾನ ಉಪನ್ಯಾಸ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೆ ಆಹಾರ ಧಾನ್ಯ ಪೂರೈಸುವ ಸಾಮರ್ಥ್ಯವಿರುವುದು ಬ್ರೆಜಿಲ್, ಭಾರತ ಹಾಗೂ ಚೀನಾಗಳಿಗೆ ಮಾತ್ರ. ಅದರಲ್ಲೂ ಭಾರತ ಉತ್ಕೃಷ್ಟವಾಗಿದೆ. ವೈವಿಧ್ಯತೆಯೇ ಇಲ್ಲಿನ ಸತ್ವವಾಗಿದೆ ಎಂದರು.
ಭಾರತವು 143 ಹೆಕ್ಟೇರ್ ಪ್ರದೇಶದಲ್ಲಿ 260 ಮಿಲಿಯನ್ ಟನ್ ಆಹಾರ ಉತ್ಪಾದಿಸಿದೆ. ಅದೇ ಚೀನಾವು 103 ಮಿಲಿಯನ್ ಹೆಕ್ಟೇರ್‌ನಲ್ಲಿ 500 ಮಿಲಿಯನ್ ಟನ್ ಆಹಾರ ಉತ್ಪಾದಿಸಿದೆ. ನಿಗದಿತ ಅವಧಿಯಲ್ಲಿ ಭಾರತಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಆಹಾರ ಉತ್ಪಾದಿಸಿ ಚೀನಾ ಬೆರಗು ಮೂಡಿಸಿದೆ. ಅಭಿವೃದ್ಧಿಗೊಂಡ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡಿರುವುದೇ ಮುಖ್ಯ ಕಾರಣ. ಆದರೆ, ಭಾರತೀಯರಾದ ನಾವು ತೀರಾ ಹಿಂದುಳಿದಿದ್ದು, 30 ವರ್ಷಗಳ ಹಿಂದಿನ ತಂತ್ರಜ್ಞಾನವನ್ನೇ ಬಳಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ನಾಲ್ಕು ದಶಕಗಳಲ್ಲಿ ಚೀನಾವು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ.
ಚೀನಾದ ರೇಷ್ಮೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದು, ಇತರೆ ಕಚ್ಚಾ ಪದಾರ್ಥಗಳನ್ನು ರಫ್ತು ಮಾಡುತ್ತಿದೆ. ಅದೇ ಮೈಸೂರು ಸಿಲ್ಕ್‌ಗೂ ಒಳ್ಳೆಯ ಹೆಸರಿದ್ದರು ಕೂಡ ಮಾರಾಟ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.
ಹೊಸ ತಂತ್ರಜ್ಞಾನ ಅಗತ್ಯ: ಕಾರ್ಯಕರ್ತರು ಹಾಗೂ ಉಗ್ರಗಾಮಿಗಳಿಂದ ಕಾನೂನುಗಳು ಅವೈಜ್ಞಾನಿಕವಾಗಿ ರೂಪುಗೊಳ್ಳುತ್ತಿವೆ. ನಮ್ಮ ದೇಶದಲ್ಲಿ ಬೆಳೆಯುತ್ತಿರುವ ಹಲವು ಬೆಳೆಗಳು ಭಾರತದ್ದಲ್ಲ. ಅಲ್ಲದೇ ಸಂಪೂರ್ಣ ಸ್ವದೇಶಿ ಎಂದರೆ ಬದುಕಲು ಸಾಧ್ಯವಿಲ್ಲ. ನಮ್ಮ ಮಾತೃಭೂಮಿಯಲ್ಲಿ ಏನೆಲ್ಲಾ ಬೆಳೆಯೋಕೆ ಸಾಧ್ಯವಿದೆಯೋ ಅದನ್ನು ಸಾಕಾರವಾಗಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗಾಗಿ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡು ಪ್ರತಿಫಲ ಪಡೆಯಬೇಕು. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಏಷ್ಯಾ ಖಂಡದ 15 ದೇಶಗಳಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ಜನ ಹೆಚ್ಚಾಗಿ ಏಷ್ಯಾ ಖಂಡದಲ್ಲಿಯೇ ಇದ್ದಾರೆ. ಅದರಲ್ಲೂ ಭಾರತದಲ್ಲಿ ಅಪೌಷ್ಟಿಕತೆ ಕೊರತೆ ತಾಯಿ- ಮಗುವಿನ ಮರಣ ಹೆಚ್ಚುತ್ತಿದೆ. ನಮಗೆ ಹೋಲಿಸಿಕೊಂಡರೆ ಆಫ್ರಿಕಾ ದೇಶಗಳೇ ಉತ್ತಮ ಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪ್ರಸಕ್ತ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಕಾಲೇಜು ವತಿಯಿಂದ ಡಾ.ಎಂ. ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕೇಶ್‌ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಎಚ್.ಸಿ. ಹೊನ್ನಪ್ಪ, ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪೂಜಾ ಅನುಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement