ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾವಿಕಾಸ ಕಾಲೇಜಿನಲ್ಲಿ ವಿಚಾರ ಸಂಕಿರಣ

Mainashree
Updated On : 20 Mar 2014, 12:10 pm

ಮೈಸೂರು: ಭಾರತೀಯ ನ್ಯೂಕ್ಲಿಯರ್ ಸೊಸೃಟಿ ಸಹಯೋಗದಲ್ಲಿ ನಗರದ ವಿದ್ಯಾ ವಿಕಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ವಿಕಿರಣಶೀಲತೆ- ನೃಸರ್ಗಿಕ ಮತ್ತು ಮಾನವ ನಿರ್ಮಿತ ಕುರಿತ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಎಆರ್‌ಸಿ ಮಾಜಿ ನಿರ್ದೇಶಕ ಡಾ.ಡಿ.ವಿ. ಗೋಪಿನಾಥ್ ಮಾತನಾಡಿ, ಭೂಮಿ ಸೃಷ್ಟಿಯಾದಾಗಿನಿಂದ ಪರಮಾಣು ಇಂಧನ ಸರಣಿಯ ಹುಟ್ಟು ಆರಂಭವಾಯಿತು.
ಪಳೆಯುಳಿಕೆ ವಸ್ತುಗಳ ಮತ್ತು ಪರಮಾಣು ತ್ಯಾಜ್ಯಗಳ ವಿಲೇವಾರಿ ಗಣಿಗಾರಿಕೆಗೂ ಚಾಲನೆ ದೊರೆಯಿತು. ನೃಸರ್ಗಿಕ ವಿಕಿರಣಶೀಲತೆ ಮೇಲೆ ಚರ್ಚೆಗಳು ಸಾಕಷ್ಟು ನಡೆದಿವೆ. ಆದ್ದರಿಂದ ಈ ವಿಚಾರ ಸಂಕಿರಣವು ಸಮಾಜದಲ್ಲಿ ರೇಡಿಯೋಚಟುವಟಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಚೆಲ್ಲಲಿ ಎಂದು ಆಶಿಸಿದರು.
ಮೈಸೂರಿನ ಆರ್‌ಎಂಪಿ ಯೋಜನಾ ನಿರ್ದೇಶಕ ಡಾ.ಟಿ.ಕೆ. ಬೆರಾ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಮಂಗಳೂರು ವಿವಿಯ ಯುಎಸ್‌ಐಸಿ ಪ್ರಾಧ್ಯಾಪಕ ಎನ್. ಕರುಣಾಕರ್, ಡಾ.ಜೆ. ಸಣ್ಣಪ್ಪ, ಡಾ. ವೀನಾಕ್ಷಿ ಸುಂದರಂ, ಡಾ.ಶೇಷ ಪ್ರಕಾಶ್, ಡಾ.ಎನ್.ಎಸ್. ಶ್ರೀರಾಮ್, ಶ್ರೀಕಂಠನ್, ಪ್ರೊ.ಎಂ.ಕೆ. ರಾಮಸ್ವಾಮಿ, ಡಾ.ಎನ್.ಎಸ್. ಶ್ರೀರಾಮ್,  ಕವೀಶ್‌ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement