ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾಲೀಕನ ಮನೆಯಲ್ಲಿ ಕಳವು: ಇಬ್ಬರ ಬಂಧನ

Mainashree
Updated On : 20 Mar 2014, 10:27 am

ಮೈಸೂರು: ಮಾಲೀಕನ ಮನೆಯಲ್ಲಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿ, ಕಳವು ಮಾಡಿದ್ದ 3.16 ಲಕ್ಷ ಮೌಲ್ಯದ ಚಿನ್ನಾಭರಣ, ನಗದನ್ನು ವಶಪಡಿಸಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಹಾರ್ನಹಳ್ಳಿ ಹೋಬಳಿ ಆನಂದಗೆರೆ ನಿವಾಸಿಗಳಾದ ರಮೇಶ್ ಎಂಬವರ ಪುತ್ರ ಆನಂದ ಮತ್ತು ಲೇ. ಕೃಷ್ಣೇಗೌಡ ಎಂಬವರ ಪುತ್ರ ರಾಜು ಬಂಧಿತ ಆರೋಪಿಗಳು.
ಈ ಇಬ್ಬರು ಸಮೋಸ ವ್ಯಾಪಾರಿ ದಿನೇಶ್ ಬಳಿ ಕೆಲಸಕ್ಕಿದ್ದರು. ದಿನೇಶ್ ತಮ್ಮ ಮೈದುನನ ಲಗ್ನಪತ್ರಿಕೆ ಹಂಚಲು ರಾಮಕೃಷ್ಣನಗರಕ್ಕೆ ಹೋಗಿದ್ದ ವೇಳೆ ಕಳವು ಮಾಡಿದ್ದರು. ಈ ಇಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿ, 167 ಗ್ರಾಂ. ಚಿನ್ನಾಭರಣ, 52 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಂ.ಎಂ. ಮಹದೇವಯ್ಯ, ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ಅವರ ಮಾರ್ಗದರ್ಶನದಲ್ಲಿ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್, ಎಸ್ಐ ತಿಮ್ಮರಾಜು, ಶಿವಕುಮಾರ್ ಮತ್ತು ಸಿಬ್ಬಂದಿ ಸಿದ್ದೇಗೌಡ, ಕಾಂತರಾಜು, ಯೋಗೇಶ ಈ ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement