ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಸ್ಯ, ವಿಡಂಬನೆಯ ಪ್ರತೀಕ ಚುಟುಕು: ಡಾ. ರಾಗೌ

Mainashree
Updated On : 20 Mar 2014, 10:27 am

ಹುಣಸೂರು: ಹಾಸ್ಯ ಹಾಗೂ ವಿಡಂಬನೆಯ ಪ್ರತೀಕವೇ ಚುಟುಕು ಕಾವ್ಯದ ಮಹತ್ವ ಎಂದು ಸಾಹಿತಿ ಡಾ.ರಾಗೌ ಹೇಳಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್, ಮಕ್ಕಳ ಸಾಹಿತ್ಯ ವೇದಿಕೆ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಚುಟುಕು ಕವಿಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಕಾಲದಿಂದಲೂ ಚುಟುಕು ಕಾವ್ಯ ಒಂದು ಪ್ರಮುಖ ಪ್ರಕಾರವಾಗಿ ಬೆಳೆದಿದೆ. ಕಾವ್ಯದಲ್ಲಿ ಮಾಧುರ್ಯ ಹಾಗೂ ಲಯ ಇರಬೇಕಾದುದು ಅಗತ್ಯ. ಯಾವುದೇ ಚಳವಳಿ, ಸಿದ್ಧಾಂತ, ಪಂಥಗಳಿಗೆ ಜೋತು ಬೀಳದೇ ಕಾಲದ ದನಿಯಾಗಿ ಕಾವ್ಯ ರಚಿಸಿದಾಗ ಮಾತ್ರ ಅದಕ್ಕೆ ಸಾರ್ವತ್ರಿಕ ಒಪ್ಪಿಗೆ ಪ್ರಾಪ್ತವಾಗುತ್ತದೆ. ಕವಿತೆ ವ್ಯಕ್ತವೂ ಅಲ್ಲ, ಅವ್ಯಕ್ತವೂ ಅಲ್ಲ. ಅದು ವ್ಯಕ್ತ-ಅವ್ಯಕ್ತಗಳ ನಡುವೆ ಸೃಷ್ಠಿಯಾಗುವ ಯುಗವಾಣಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಕಲುಷಿತವಾಗುತ್ತಿರುವ ದೇಶದ ಸಾಮಾಜಿಕತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳು ಮಾತ್ರ ದಿಕ್ಸೂಚಿಯಾಗಬಲ್ಲವು. ಹದಗೆಟ್ಟ ಪರಿಸರಕ್ಕೆ ಶುದ್ಧತೆಯನ್ನು ತುಂಬುವ ಕೆಲಸ ಸಾಹಿತ್ಯದಿಂದಾಗಲಿ ಎಂದು ಆಶಿಸಿದರು.
ಪರಿಷತ್ತಿನ ಗೌರವಾಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಕರ್ಣಕುಪ್ಪೆ ತಾಪಂ ಸದಸ್ಯ ಕೆ. ಗಣಪತಿ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಹಿಂಡಗುಡ್ಲು ರಾಜೇಗೌಡ ಮಾತನಾಡಿದರು.
ರೋಟರಿ ಅಧ್ಯಕ್ಷ ರಾಜಶೇಖರ್, ತಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ಚೆನ್ನವೀರಪ್ಪ, ಸ್ಪಂದನ ಸಾಂಸ್ಕೃತಿಕ ಪರಿಷತ್ನ ಅಧ್ಯಕ್ಷ ಟಿ. ಲೋಕೇಶ್ ಇದ್ದರು. ನಂತರ ನಡೆದ ಚುಟುಕು ಕವಿತೆಗಳ ವಾಚನಗೋಷ್ಠಿಯನ್ನು ಸಾಹಿತಿ ಸಹನಾ ಕಾಂತಬೈಲು ಉದ್ಘಾಟಿಸಿದರು. ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 80 ಮಂದಿ ಕವಿ, ಕವಿಯತ್ರಿಯರು ಕವನ ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement