ಚಿನ್ನ ಎಗರಿಸಿದ ದುಷ್ಕರ್ಮಿಗಳು
ಮೈಸೂರು: ವಿಳಾಸ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ನಗರದ ವಿವಿಧೆಡೆ ಸರಗಳ್ಳತನ ನಡೆಸಿದ್ದಾರೆ. ಬೃಂದಾವನ ಬಡಾವಣೆ ಮೊದಲ ಹಂತ, 3ನೇ ಕ್ರಾಸ್ ನಿವಾಸಿ ಶ್ರೀಮತಿ ಅವರು ಬೆಳಗ್ಗೆ 7.35ರ ಸುಮಾರಿನಲ್ಲಿ ಮನೆಯ ಪೋರ್ಟಿಕೊ ಬಳಿ ನಿಂತಿದ್ದಾಗ ಬೈಕ್ನಲ್ಲಿ ಒಂದು ಚೀಟಿ ಹಿಡಿದು ಬಂದ ಇಬ್ಬರು ದುಷ್ಕರ್ಮಿಗಳು ಮನೆ ನಂ. 44 ಎಂಬ ಚೀಟಿಯನ್ನಷ್ಟೆ ನೀಡಿ ವಿಳಾಸ ಕೇಳಿದ್ದಾರೆ. ಈ ನಂಬರಿನ ಮನೆ ಇಲ್ಲಿಲ್ಲ ಎನ್ನುವಷ್ಟರಲ್ಲಿ ಶ್ರೀಮತಿ ಅವರ ಗುತ್ತಿಗೆಯಲ್ಲಿದ್ದ ಸುಮಾರು 90 ಗ್ರಾಂ. ಚಿನ್ನದ ಎರಡೆಳೆಯ ಮಾಂಗಲ್ಯ ಸರ ಕಸಿದು ಪರಾರಿ ಆಗಿದ್ದಾರೆ. ಈ ಸಂಬಂಧ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ಷ್ಮೀಪುರಂ ಮೊದಲ ಹಂತದ ನವಾಸಿ ವಸಂತಲಕ್ಷ್ಮಿ (70) ಅವರು ಮನೆಯ ಬಳಿ ಇದ್ದಾಗ ಬೈಕ್ನಲ್ಲಿ ಬಂದ ಯುವಕರಿಬ್ಬರು ವಿಳಾಸ ಕೇಳುವ ನೆಪದಲ್ಲಿ ಬಂದು 40 ಗ್ರಾಂ. ಚಿನ್ನದ ಸರ ಅಪಹರಿಸಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೆ ಮಾದರಿಯಲ್ಲಿ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿಯೂ ಮಹಿಳೆಯೊಬ್ಬರಿಂದಲೂ ದುಷ್ಕರ್ಮಿಗಳು ಸರ ಅಪಹರಿಸಿದ್ದಾರೆ. ದುಷ್ಕರ್ಮಿಗಳು ಸುಮಾರು 25 ರಿಂದ 30 ವರ್ಷದವರು ಎನ್ನಲಾಗಿದೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ.