ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಶ್ವನಾಥ್ ಬಳಿ 1.95 ಕೋಟಿ ಆಸ್ತಿ

Mainashree
Updated On : 21 Mar 2014, 11:17 am

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ತಮ್ಮ ಆಸ್ತಿ ಘೋಷಿಸಿದ್ದಾರೆ. ವಿಶ್ವನಾಥ್ ತಮ್ಮಲ್ಲಿ 2 ಲಕ್ಷ, ಪತ್ನಿ ಬಳಿ 1 ಲಕ್ಷ ರು. ನಗದು ಹೊಂದಿದ್ದಾರೆ. ಅಲ್ಲದೆ ನಜರ್‌ಬಾದ್‌ನ ವಿಜಯಬ್ಯಾಂಕ್‌ನಲ್ಲಿ 5.90 ಲಕ್ಷ, ಟಿಜಿಎಂಸಿಯಲ್ಲಿ 23 ಸಾವಿರ, ನವದೆಹಲಿಯ ಎಸ್‌ಬಿಐ ಖಾತೆಯಲ್ಲಿ 7.30 ಲಕ್ಷ, ಎಂಡಿಸಿಸಿ ಬ್ಯಾಂಕ್‌ನಲ್ಲಿ 2 ಸಾವಿರ ಠೇವಣಿ, ಮತ್ತು 68 ಸಾವಿರ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಶಾಂತಮ್ಮ ಅವರು ಕೆ.ಆರ್. ನಗರ ಎಸ್‌ಬಿಐ ಶಾಖೆಯಲ್ಲಿ 7 ಸಾವಿರ, ನಜರ್‌ಬಾದ್ ವಿಜಯಬ್ಯಾಂಕ್ ಶಾಖೆಯ ಒಂದು ಖಾತೆಯಲ್ಲಿ ರು. 9,779 ಮತ್ತು 31 ಲಕ್ಷ, ಅಹಲ್ಯದೇವಿ ಮಹಿಳಾ ಸಂಘದಲ್ಲಿ ರು. 5,860 ಇದೆ. ಅಲ್ಲದೆ 7.56 ಲಕ್ಷದ ಚಿನ್ನ, 90 ಸಾವಿರ ಮೌಲ್ಯದ ಬೆಳ್ಳಿ ಮತ್ತು ತಾಯಿ ನೀಡಿದ 6.41 ಲಕ್ಷ ಮೌಲ್ಯದ ಚಿನ್ನ ಇದೆ. ಒಟ್ಟಾರೆ ವಿಶ್ವನಾಥ್ ರು. 19,76,649 ಮತ್ತು ಪತ್ನಿ ಶಾಂತಮ್ಮ 47,10,528 ಚರಾಸ್ತಿಯನ್ನು, ಮಾರಗೌಡನಹಳ್ಳಿ ಮತ್ತು ಸಿದ್ದಾಪುರ ಸಮೀಪದ ಜಮೀನು ಸೇರಿ ವಿಶ್ವನಾಥ್ ರು. 1.95 ಕೋಟಿ ಮತ್ತು ಪತ್ನಿ ಶಾಂತಮ್ಮ 40 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement