ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುತ್ತೂರು ಶ್ರೀಗಳ ಸಂತಾಪ

Mainashree
Updated On : 21 Mar 2014, 11:22 am

ಮೈಸೂರು: ಮಂತ್ರಾಲಯದ ಯತಿಗಳಾಗಿದ್ದ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳ ನಿಧನಕ್ಕೆ ಸುತ್ತೂರು ವೀರಸಿಂಹಾಸನ ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳವರು 2006 ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡರು. ಅವರು ಬಹುತೇಕ ಎಲ್ಲ ಲೌಖಿಕ ವ್ಯವಹಾರಗಳಿಂದಲೂ ದೂರವಿದ್ದು ಜಪತಪ ಅನುಷ್ಠಾನಗಳಲ್ಲಿ ನಿರಂತರಾಗಿ ಶ್ರೀಮಠದ ಸತ್ಸಂಪ್ರದಾಯವನ್ನು ಪಾಲಿಸುತ್ತ ಬಂದಿದ್ದರು. 2009 ರಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದ ಮಂತ್ರಾಲಯವನ್ನು ಒಂದು ವರ್ಷದೊಳಗೆ ಪುನರ್‌ನಿರ್ಮಾಣ ಮಾಡಿದ ಕರ್ತೃತ್ವಶಾಲಿಗಳು. ಅವರಿಗೆ ಅನಾರೋಗ್ಯವಾದ ಕೂಡಲೇ ಮಠದ ಆಡಳಿತವನ್ನು ಅವರ ಉತ್ತರಾಧಿಕಾರಿಗಳಿಗೆ ನೀಡಿದ ಶ್ರೀಗಳು ಪದ್ಮಪತ್ರಮಿವಾಂಭಸ ಎಂಬ ರೀತಿಯಲ್ಲಿ ತುಂಬು ಜೀವನ ನಡೆಸಿದ ತತ್ವವೆತ್ತರು. ಶ್ರೀಗಳವರ ಅಗಲಿಕೆಯಿಂದ ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಒಂದು ರೀತಿಯ ನಿರ್ವಾತ ಉಂಟಾಗಿದೆ ಶ್ರೀಮಠದ ಭಕ್ತರು ದಿಗ್ಮೂಢರಾಗಿದ್ದಾರೆ. ಶ್ರೀಗಳವರ ಆತ್ಮಕ್ಕೆ ಚಿರಶಾಂತಿಯನ್ನು, ಶ್ರೀಮಠದ ಅಪಾರ ಭಕ್ತವೃಂದಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಆಶಿಸುತ್ತೇಗೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement