ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೆಂಕಿ ಮನೆಗೆ ಸೋಮಣ್ಣ ಭೇಟಿ

Vishwanath S
Updated On : 23 Mar 2014, 12:46 pm

ನಂಜನಗೂಡು: ಹಿರಿಯ ರಾಜಕಾರಣಿ, ಮಾಜಿ ಸಚಿವ ಎಂ.ಮಹದೇವ್ ಮನೆಗೆ ಶನಿವಾರ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಸೋಮಣ್ಣ ಭೇಟಿ ನೀಡಿ, ಮಹತ್ವದ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಪಟ್ಟಣದ ಬಸವನಗುಡಿ ಬ್ಲಾಕ್ ಬಡಾವಣೆಯಲ್ಲಿರುವ ಮಹದೇವ್ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಮುಖಂಡರು ಅವರ ಜೊತೆ ಮಾತುಕತೆ ನಡೆಸಿದರು.
ಸೋಮಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರ ಜೊತೆ ಮುನಿಸಿಕೊಂಡು ಜೆಡಿಎಸ್ ಸೇರಿದ್ದರು. ಆ ಪಕ್ಷದಲ್ಲೂ ಕೆಲವು ದಿನಗಳಿಂದ ದೂರ ಉಳಿದಿದ್ದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಭಾಗದಲ್ಲಿ ವೀರಶೈವ ಮುಖಂಡರಾಗಿರುವುದರಿಂದ ಹಲವು ರಾಜಕೀಯ ಪಕ್ಷಗಳು ಮಹದೇವು ಅವರನ್ನು ಸೆಳೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಬಿಜೆಪಿ ವರಿಷ್ಠರ ಆದೇಶದನ್ವಯ ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಎಂ. ಮಹದೇವ್ ಅವರ ಜೊತೆ ಸುಮಾರು 30 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ಈ ಭಾಗದಲ್ಲಿ ನಿಮ್ಮ ಅಭಿಮಾನಿಗಳು ರಾಜಕೀಯ ಶಕ್ತಿ, ಸಾವಿರಾರು ಬೆಂಬಲಿಗರು ಇರುವುದರಿಂದ ನಿಮ್ಮ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಆದ್ದರಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿ, ಪಕ್ಷಕ್ಕೆ ಬರುವ ವಿಚಾರವನ್ನು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮತ್ತೊಮ್ಮೆ ತಿಳಿಸಿದರು. ಮಾಜಿ ಸಚಿವ ಎಂ. ಮಹದೇವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಹೇಸಿಗೆ ತರುವಷ್ಟು ಬೇಸರ ಉಂಟಾಗಿದ್ದು, ನನಗೆ ರಾಜಕೀಯವೇ ಬೇಡ ಎಂಬ ನಿರ್ಧಾರದಲ್ಲಿದ್ದೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮಾಜಿ ಶಾಸಕರಾದ ಸಿ.ರಮೇಶ್, ಜಿ.ಎನ್. ನಂಜುಂಡಸ್ವಾಮಿ, ಮುಖಂಡರಾದ ಸಿ.ಎಸ್. ನಿರಂಜನ್‌ಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಾಜಿ ಎಸ್.ಡಿ. ಮಹೇಂದ್ರ, ಜಿಪಂ ಸದಸ್ಯ ಡಾ.ಶಿವರಾಂ, ಪುಟ್ಟಸ್ವಾಮಿ, ಬಿಜೆಪಿ ಅಧ್ಯಕ್ಷ ಕೆ.ಎಂ. ಮಹೇಶ್, ಶಿವನಂಜಪ್ಪ, ಎಚ್.ಎಸ್. ಮಹದೇವಸ್ವಾಮಿ, ರಂಗಸ್ವಾಮಿ, ಪುರುಷೋತ್ತಮ, ಮೆಲ್ಲಹಳ್ಳಿ ಮಹದೇವಸ್ವಾಮಿ, ಗುರುಪಾದ, ಪುರಸಭಾ ಸದಸ್ಯ ಎಚ್.ಎಸ್. ಮಹದೇವಸ್ವಾಮಿ, ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಗಿರೀಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement