ಚಾಮುಂಡಿಬೆಟ್ಟದಲ್ಲಿ ಮತದಾನ ಜಾಗೃತಿ
ಮೈಸೂರು: ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವ ಬಲಪಡಿಸಿ ಎಂದು ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಜಿಲ್ಲಾ ಮತದಾನ ಜಾಗೃತಿ ಹಾಗೂ ಸಹಭಾಗಿತ್ವ ಸಮಿತಿಯವರು ಚಾಮುಂಡಿಬೆಟ್ಟದಲ್ಲಿ ಭಾನುವಾರ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಚಾಮುಂಡಿಬೆಟ್ಟದ ಪಾದದಿಂದ ಆರಂಭವಾದ ಜಾಗೃತಿ ಕಾರ್ಯಕ್ರಮವು ದೇವಸ್ಥಾನದ ಬಳಿ ಅಂತ್ಯಗೊಂಡಿತು. ರಜಾ ದಿನವಾದ ಭಾನುವಾರ ಹೆಚ್ಚಿನ ಜನರು ಚಾಮುಂಡಿಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವ ಹಿನ್ನೆಲೆಯಲ್ಲಿ ಸ್ವೀಪ್ ತಂಡ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿತು.