ಜೆಡಿಎಸ್ ಅಭ್ಯರ್ಥಿ ಯಾರೇ ಆದ್ರೂ ಗೆಲ್ಲಿಸಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಸಭೆ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಮ್ಮ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಹಿಳೆಯರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಮನೆ ಮನೆಗೆ ತೆರಳಿ ತಕ್ಷಣ ಮತ ಕೇಳಬೇಕು. ನಮ್ಮೊಳಗಿನ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ದುರ್ಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ವೇಣುಗೋಪಾಲ್, ಪಿ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿತಾ, ಉಪಾಧ್ಯಕ್ಷೆ ಅಂಜಲಿ ರಾಮ್, ಪದಾಧಿಕಾರಿಗಳಾದ ಪ್ರೇಮಾ ಶಂಕರೇಗೌಡ, ನಾಡನಹಳ್ಳಿ ಸಿದ್ದರಾಜು, ತೇಜಾಮಣಿ, ಬಿ.ಟಿ. ರಾಜಮ್ಮ, ಚಿಕ್ಕತಾಯಮ್ಮ, ವೇದಾವತಿ, ಜಯಮ್ಮ, ರುಕ್ಮಿಣಿ, ಸವಿತಾ ಶಿವಕುಮಾರ್, ದಾಕ್ಷಾಯಿಣಿ ಗುರುಮೂರ್ತಿ, ಭಾರತಿ, ಸರಸ್ವತಿ, ಸುಶೀಲ, ಜಯಮ್ಮ, ಅನಂತ ನಾರಾಯಣ್, ಮುದ್ದುರಾಜು, ರಿಜ್ವಾನ್ ಅಹಮ್ಮದ್ ಇದ್ದರು.