ಪಕ್ಷಗಳಿಗೆ ಅಧ್ಯಕ್ಷರು, ಕಾರ್ಯದರ್ಶಿಗಳ ನೇಮಕ
ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ರಾಜೇಂದ್ರನಗರ ಕುರಿಮಂಡಿ ಬ್ಲಾಕ್ ನಿವಾಸಿ ಜಿ.ಸಿದ್ದರಾಜು ಅವರನ್ನು ವಿಭಾಗದ ಅಧ್ಯಕ್ಷ ಎಸ್.ಎಸ್. ಪ್ರಕಾಶಮ್ ನೇಮಿಸಿದ್ದಾರೆ. ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರನಗರ ಬೆಲವತ್ತ ಕೆಸರೆ ನಿವಾಸಿ ಇಲಿಯಾಸ್ ಅಹಮದ್ ಅವರನ್ನು ವಿಭಾಗದ ಅಧ್ಯಕ್ಷ ನಾಸೀರ್ ಅಹಮದ್ ನೇಮಿಸಿದ್ದಾರೆ. ಮೈಸೂರು ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಇತರೆ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್. ಹರೀಶ್ ಅವರನ್ನು ನೇಮಿಸಲಾಗಿದೆ ಎಂದು ವಿಭಾಗದ ಅಧ್ಯಕ್ಷ ಎಂ. ಮಹೇಂದ್ರ ತಿಳಿಸಿದ್ದಾರೆ. ನಗರ ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿಯಾಗಿ ಕೆ.ಆರ್. ಮೊಹಲ್ಲಾ ನಿವಾಸಿ ನಾಗಭೂಷಣ್ ರಾವ್ ಅವರನ್ನು ವಿಭಾಗದ ಅಧ್ಯಕ್ಷ ಪಿ. ಕುಮಾರ್ ನೇಮಿಸಿದ್ದಾರೆ.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸಭೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ನೇಮಿಸಿದ ಅಭ್ಯರ್ಥಿ ಪರ ಕೆಲಸ ಮಾಡಲು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ನಿರ್ಧರಿಸಿದೆ. ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಕ್ಷ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದಲ್ಲಿ ರಾಗ ದ್ವೇಷ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಅಲ್ಪಸಂಖ್ಯಾತ ಮುಖಂಡರು ವಾಗ್ದಾನ ನೀಡಿದರು. ಮುಖಂಡರಾದ ಅಜೀಜ್ ಉಲ್ಲಾ (ಅಜ್ಜು), ಟಿ. ದೇವರಾಜ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.