ಸಕಾರಾತ್ಮಕ ಮನೋಭಾವ ಮೂಡಿಸಿಕೊಳ್ಳಿ
ಮೈಸೂರು: ಕನ್ನಡಿಗರ ಹೋರಾಟ ಮನೋಭಾವ ಕೊರತೆಯಿಂದ ಕರ್ನಾಟಕದ ಕೆಲವು ಭಾಗಗಳು ಇಂದು ಮಹಾರಾಷ್ಟ್ರಕ್ಕೆ ಸೇರಿವೆ. ಆದ್ದರಿಂದ ಕನ್ನಡಿಗರು ಸಕಾರಾತ್ಮಕ ಹೋರಾಟದ ಮನೋಭಾವವನ್ನು ಜೀವನದಲ್ಲಿ ಮೂಡಿಸಿಕೊಳ್ಳುವಂತೆ ಕೂಡಲಸಂಗಮ ಬಸವ ಧರ್ಮ ಪೀಠದ ಡಾ.ಮಾತೆ ಮಹಾದೇವಿ ಹೇಳಿದರು.
ಕೂಡಲ ಸಂಗಮ ಬಸವ ಧರ್ಮ ಪೀಠ, ಮೈಸೂರು ರಾಷ್ಟ್ರೀಯ ಬಸವ ದಳ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಗರದ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾ ಭವನದಲ್ಲಿ ಗುರು ತತ್ವರತ್ನ ಬಿರುದು ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ಧರ್ಮ ತ್ರಾನದ ಕೊರತೆ ಅಧಿಕವಾಗಿದೆ ಎಂದರು. ಸಮ್ಮುಖ ವಹಿಸಿದ್ದ ಅಕ್ಕಮಹಾದೇವಿ ಅನುಭಾವ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಇಂದು ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರಗಳು ಅಧಿಕ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದೆ. ಇಂತಹ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವ ಉದ್ದೇಶದಿಂದ ಕೂಡಲಸಂಗಮ ಬಸವ ಧರ್ಮಪೀಠ ಕಳೆದ 40 ವರ್ಷದಿಂದ ಸಾಹಿತ್ಯ ಪ್ರಕಟಣೆ, ಪ್ರವಚನ ಸಮಾರಂಭ ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.