ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಪ್ರವಾಸ ಇಂದು
ಕೆ.ಆರ್. ನಗರ: ಸಂಸದೆ, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಮಾ.25 ರಂದು ತಾಲೂಕಿನ ಚುಂಚನಕಟ್ಟೆ ಹೋಬಳಿಯಲ್ಲಿ ಪ್ರವಾಸ ಮಾಡುವರು. ಶ್ರೀರಾಮಪುರ ಗ್ರಾಮದಿಂದ ಪ್ರವಾಸ ಆರಂಭಿಸುವ ಅವರು, ಹೋಬಳಿಯ ಎಲ್ಲ ಆರು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡುವರು. ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಸೇರಿದಂತೆ ಪಕ್ಷದ ಚುನಾಯಿತ ಜನ ಪ್ರತಿನಿಧಿಗಳು, ಮುಖಂಡರು ಮತಯಾಚನೆಯಲ್ಲಿ ಪಾಲ್ಗೊಳ್ಳುವರು ಎಂದು ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಬ್ಬಾಳು ರಾಜಶೇಖರ ಕೋರಿದ್ದಾರೆ.