ಚಿಕ್ಕಣ್ಣನನ್ನು ಸೋಲಿಸಿದ್ದಕ್ಕೆ ಆ ರೀತಿ ಹೇಳಿದೆ: ಸಿಎಂ
ಮೈಸೂರು: ಅಭಿವೃದ್ಧಿ ವಿಷಯದಲ್ಲಿ ತಾವು ಯಾವುದೇ ಕ್ಷೇತ್ರವನ್ನು ಕಡೆಗಣಿಸುತ್ತಿಲ್ಲ. ವಿರೋಧ ಪಕ್ಷದವರು ಗೆದ್ದಿರುವ ಕ್ಷೇತ್ರಗಳಿಗೆ ಹೋಗುವುದಿಲ್ಲ ಎಂದು ಹೇಳಿಲ್ಲ. ಎಚ್.ಡಿ. ಕೋಟೆ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಣ್ಣ ಅವರನ್ನು ಸೋಲಿಸಿದ್ದರಿಂದ ಈ ರೀತಿ ಹೇಳಿದೆ. - ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ. ಭಾನುವಾರ ಎಚ್.ಡಿ. ಕೋಟೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಣ್ಣ ಅವರನ್ನು ಸೋಲಿಸಿದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಬಗ್ಗೆ ಸೋಮವಾರ ಸುದ್ದಿಗಾರರು ಪ್ರಶ್ನಿಸಿದಾಗ, ನಮ್ಮ ಪಕ್ಷದ ಶಾಸಕರೇ ಇದ್ದರೆ ಹೆಚ್ಚಿನ ಕೆಲಸಗಳು ಆಗುತ್ತಿದ್ದವು. ಎಚ್.ಡಿ. ಕೋಟೆಗೆ ಮೂರ್ನಾಲ್ಕು ಬಾರಿ ಹೋಗುತ್ತಿದ್ದೆ ಎಂದು ಸಮರ್ಥಿಸಿಕೊಂಡರು.