ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಸ ಗುಡಿಸುವವರ ಧರಣಿ

Rashmi Kasaragodu
Updated On : 26 Mar 2014, 1:09 am

ಮೈಸೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿ ವಿರುದ್ಧ ಮೈಸೂರು ಮಹಾನಗರಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ರೋಟರಿ ಶಾಲೆ ಮುಂಭಾಗ ಪ್ರತಿಭಟಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಭ್ರಷ್ಟಾಚಾರ, ಜಾತಿ, ಪಂಕ್ತಿಭೇದ, ವಂತಿಗೆ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕು. ಈ ಮೂಲಕ ನಮ್ಮ ಮಕ್ಕಳಿಗೆ ಶಿಕ್ಷಣದಲ್ಲೂ ಸಮಾನತೆ ನೀಡಬೇಕು. ಪೌರಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಾಲಿಕೆ ವತಿಯಿಂದ 25 ಲಕ್ಷ ರು. ಅನುದಾನ ಮೀಸಲಿಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಖಾಸಗಿ ಶಾಲೆಗಳಲ್ಲಿ ಪೌರಕಾರ್ಮಿಕರು, ದಲಿತರ ಮಕ್ಕಳಿಗೆ ಡೊನೇಷನ್ ನೀಡಲು ಒತ್ತಡ ಹೇರಿದರೇ ಸ್ವಚ್ಛತಾ ಕಾರ್ಯವನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್‌ರಾಜ್, ದಸಂಸ ಮುಖಂಡ ಶಿವರಾಜ್, ಹರ್ಷಕುಮಾರ್, ಕರ್ನಾಟಕ ಸೇನಾ ಪಡೆಯ ತೇಜಸ್ ಲೋಕೇಶ್‌ಗೌಡ, ಚಂದ್ರಶೇಖರ್, ಸವಿತಾ ಸಮಾಜದ ರಮೇಶ್, ಕೆ.ಆರ್. ಕ್ಷೇತ್ರ ಪೌರಕಾರ್ಮಿಕರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಟಿ.ಪಿ. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement