ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತತ್ವಶಾಸ್ತ್ರಕ್ಕೆ ವಿವೇಕರು ಸೀಮಿತ ಬೇಡ

Rashmi Kasaragodu
Updated On : 26 Mar 2014, 1:08 am

ಕ.ಪ್ರ.ವಾರ್ತೆ     ಮೈಸೂರು     ಮಾ. 25
ಸ್ವಾಮಿ ವಿವೇಕಾನಂದರನ್ನು ಕೇವಲ ತತ್ವಶಾಸ್ತ್ರಕ್ಕೆ ಸೀಮಿತಗೊಳಿಸಬಾರದು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಹಾಗೂ ಸಂದರ್ಶಕ ಪ್ರಾಧ್ಯಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ಮೈಸೂರು ವಿವಿಯ ಸ್ವಾಮಿ ವಿವೇಕಾನಂದ ಪೀಠದ ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮದ ನೆಲೆಯಲ್ಲಾಗಲಿ, ಆಧ್ಯಾತ್ಮಿಕ ದೃಷ್ಟಿಯಲ್ಲಾಗಲಿ ಅಥವಾ ತತ್ವಶಾಸ್ತ್ರಕ್ಕಾಗಲಿ ಸ್ವಾಮಿ ವಿವೇಕಾನಂದರನ್ನು ಸೀಮಿತಗೊಳಿಸಬಾರದು. ಅವರು ಇಡೀ ಸಮಾಜಕ್ಕೆ ಸೇರಿದವರು. ಅವರನ್ನು ಅಂತಹ ಸಂಪ್ರದಾಯಗಳ ಬಂಧನದಿಂದ ಹೊರತರಬೇಕು ಎಂದರು.
ವಿವೇಕಾನಂದರ ಪ್ರೇರಣೆಯಿಂದಾಗಿ ನಾನು ಇಂದು ಈ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇಷ್ಟಪಟ್ಟು ವೈದ್ಯನಾಗಬೇಕೆಂದು ಬಯಸಲಿಲ್ಲ. ಎಂಜಿನಿಯರಿಂಗ್ ಸೀಟು ಸಿಗದ ಕಾರಣ ಎಂಬಿಬಿಎಸ್‌ಗೆ ಸೇರಿದೆ. ಕಾಲೇಜಿನಲ್ಲಿ ರ್ಯಾಗಿಂಗ್ ತಡೆಯಲಾರದೆ ಚಕ್ಕರ್ ಹಾಕಿ, ರಾಮಕೃಷ್ಣ ಮಠಕ್ಕೆ ಹೋಗಿ ಕಾಲಹರಣ ಮಾಡುತ್ತಿದ್ದೆ ಹಾಗೂ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿದ್ದೆ ಎಂದು ಸ್ಮರಿಸಿದರು.
ಆಧ್ಯಾತ್ಮಿಕ ಚಿಂತನೆ ಅಗತ್ಯ: ರಾಮಕೃಷ್ಣ ಆಶ್ರಮದಲ್ಲಿ ನನ್ನನ್ನು ನೋಡುತ್ತಿದ್ದ ಸ್ವಾಮೀಜಿಯವರು ಕರೆದುಕೊಂಡು ಹೋಗಿ ಊಟ ಹಾಕುತ್ತಿದ್ದರು. ಅಲ್ಲಿಂದ ಒಡನಾಟ ಬೆಳೆಯಿತು. ಆಧ್ಯಾತ್ಮಿಕ ಹಾಗೂ ನೈತಿಕ ಚಿಂತನೆ ಬೆಳೆಸಿಕೊಂಡೆ. ವಿವೇಕಾನಂದರ ವಿಚಾರ ತಿಳಿದು, ಅವರ ತತ್ವ ಅದರ್ಶಗಳನ್ನು ಅಳವಡಿಸಿಕೊಂಡೆ. ಇಂದಿನ ಯುವಜನತೆ ಅವರ ವಿಚಾರಧಾರೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ವಿಭಾಗ ಅಧ್ಯಕ್ಷ ಡಾ.ಎಚ್.ಎಲ್. ಚಂದ್ರಶೇಖರ್ ಮಾತನಾಡಿ, ಪ್ರತಿವರ್ಷ ಒಬ್ಬೊಬ್ಬ ಮಹನೀಯರನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಕರೆದು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಂದರ್ಶಕ ಪ್ರಾಧ್ಯಾಪಕರಾಗಿ ಡಾ.ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ನೇಮಕ ಮಾಡಲಾಗಿದೆ ಎಂದರು.
ವಿಭಾಗದ ಹಿರಿಯ ಪ್ರಾಧ್ಯಾಪಕ ರಾಮಚಂದ್ರ, ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಸಾಹಿತಿ ಡಾ.ಪ್ರಭುಶಂಕರ, ಪ್ರೊ.ಪ್ರಭುಪ್ರಸಾದ್ ಹಾಗೂ ಪ್ರೊ.ರೇವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement