ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಲಕಾಡು ಎಸ್‌ಐ ವಿರುದ್ಧ ಸಲ್ಲದ ಆರೋಪ: ನಾಗರಿಕರ ಆಕ್ರೋಶ

Rashmi Kasaragodu
Updated On : 26 Mar 2014, 1:09 am

ಟಿ. ನರಸೀಪುರ: ಅಕ್ರಮಕ್ಕೆ ಕುಮ್ಮಕ್ಕು ನೀಡದಿದ್ದರಿಂದ ಸಬ್‌ಇನ್‌ಸ್ಪೆಕ್ಟರ್ ಎಸ್. ಆನಂದ್ ಅವರ ವಿರುದ್ಧ ಲಾರಿ ಮಾಲೀಕರ ಸಂಘಟನೆಗಳು ಸುಳ್ಳು ಆರೋಪಗಳನ್ನು ಮಾಡುತ್ತವೆ ಎಂದು ತಲಕಾಡಿನ ನಾಗರಿಕರು ಕಿಡಿಕಾರಿದ್ದಾರೆ.
ತಾಲೂಕಿನ ತಲಕಾಡು ಗ್ರಾಮದಲ್ಲಿ ಸಭೆ ನಡೆಸಿದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮುಖಂಡರು ಅಕ್ರಮ ಮರಳು ಸಾಗಾಣಿಕೆಗೆ ಸಹಕರಿಸಲಿಲ್ಲ ಎಂಬ ಕಾರಣದಿಂದ ಲಾರಿ ಮಾಲೀಕರ ಸಂಘಟನೆಗಳ ಮುಖಂಡರು ಎಸ್‌ಐ ಎಸ್. ಆನಂದ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿವೆ. ತಲಕಾಡಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಶ್ರಮಿಸುತ್ತಿರುವ ಆನಂದ್ ಮೇಲೆ ವೃಥಾ ಆರೋಪ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಅವಕಾಶ ಮಾಡಿಕೊಟ್ಟರೆ ಆಗ ಎಸ್‌ಐ ಆನಂದ್‌ರನ್ನು ಲಾರಿ ಮಾಲೀಕರು ಒಳ್ಳೆಯವರು ಎನ್ನುತ್ತಿದ್ದರು. ಅದೇ ಅವರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಕ್ಕೆ ಅಸಭ್ಯ ವರ್ತನೆ ಎನ್ನುತ್ತಿದ್ದಾರೆ. ಎಸ್‌ಐ ಎಸ್. ಆನಂದ್ ಕಾರ್ಯನಿರ್ವಹಣೆ ಬಗ್ಗೆ ಹೆಮ್ಮೆಯಿದೆ. ಇಂತಹ ಅಧಿಕಾರಿ ಬಗ್ಗೆ ಸುಳ್ಳು ಆರೋಪ ಹೊರಿಸುವುದನ್ನು ತೀವ್ರವಾಗಿ ಖಂಡಿಸುತ್ತವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ತಲಕಾಡು ಗ್ರಾಪಂ ಮಾಜಿ ಅಧ್ಯಕ್ಷ ಸುಂದರರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಮಲ್ಲಣ್ಣಿ, ದಸಂಸ ಸಂಚಾಲಕ  ರಾಜು, ಮುಖಂಡ ಸುಂದರನಾಯಕ್, ಉಮಾಪತಿ, ಗ್ರಾಪಂ ಸದಸ್ಯ ರಾಜು, ದಿನೇಶ್, ಸುಂದರ್, ಮರಿಸಿದ್ದಯ್ಯ, ಶ್ರೀಕಾಂತ್, ಬಂಗಾರುಸ್ವಾಮಿ, ಚಿಕ್ಕಸ್ವಾಮಿ ಕಾಂತರಾಜು, ಬಸವರಾಜು ಮಾದೇಶ್, ಮಹಾದೇವಸ್ವಾಮಿ, ಲಿಂಗರಾಜು, ಈರಣ್ಣ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement