ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯುವಕನನ್ನು ಕೊಂದಸಲಿಂಗ ಕಾಮುಕರ ಸೆರೆ

Rashmi Kasaragodu
Updated On : 26 Mar 2014, 1:08 am

ಮೈಸೂರು: ನಗರದ ಬೋಗಾದಿ ವರ್ತುಲ ರಸ್ತೆ ಬಳಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.
ಬೋಗಾದಿ ಲಿಂಗರಾಜಕಟ್ಟೆ ನಿವಾಸಿ ಸೈಯ್ಯದ್ ಜಬ್ಬಾರ್ ಎಂಬವರ ಪುತ್ರ ಮುನಾವರ್ ಅ.ಮುನ್ನಾ (23) ಮತ್ತು ಶಾರದಾದೇವಿನಗರ ಬಳಿಯ ರಾಜರಾಜೇಶ್ವರಿನಗರ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಿಶೋರ್‌ಕುಮಾರ್ ಅ. ಈಶ್ವರ್ ಅ. ಸಲ್ಯೂಷನ್ (24) ಬಂಧಿತ ಆರೋಪಿಗಳು.
ಈ ಇಬ್ಬರು ಸೇರಿ ಬೋಗಾದಿ ವರ್ತುಲ ರಸ್ತೆಯ ಪಕ್ಕದಲ್ಲಿರುವ ರಾಜರಾಜೇಶ್ವರಿನಗರದ ಉಪ್ಪರಿಗೆ ಬಸಪ್ಪ ದೇವಸ್ಥಾನದ ಆವರಣದಲ್ಲಿ ಫೆ.12ರ ರಾತ್ರಿ ನಟರಾಜ ಅ. ನಟೇಶ ಎಂಬವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಕುರಿತಂತೆ ಯಾವುದೇ ಸುಳಿವಿಲ್ಲದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮುನಾವರ್ ಮತ್ತು ಕಿಶೋರ್‌ಕುಮಾರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಮುನಾವರ್, ಕಿಶೋರ್ ಮತ್ತಿಬ್ಬರು ಆರೋಪಿಗಳೊಂದಿಗೆ ಸೇರಿ ನಟರಾಜನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ನಂತರ ಆತನ ಬಳಿಯಿದ್ದ ಹಣಕ್ಕಾಗಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಆರೋಪಿಗಳು ಸಲ್ಯೂಷನ್ ಹಾಗೂ ಎರೇಜೆಕ್ಸ್‌ನಂತಹ ಮತ್ತು ಬರುವಂತಹ ವಸ್ತುಗಳನ್ನು ಉಪಯೋಗಿಸುವ ಚಟ ಹೊಂದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿಗಳಾದ ಎಂ.ಎಂ. ಮಹದೇವಯ್ಯ, ಎ.ಎನ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ, ಇನ್ಸ್‌ಪೆಕ್ಟರ್‌ಗಳಾದ ಪಿ.ಎ. ಸೂರಜ್, ಆರ್. ಜಗದೀಶ್, ಎಸ್‌ಐ ಶ್ರೀನಿವಾಸಗೌಡ, ಎಎಸ್‌ಐಗಳಾದ ಎಂ.ಜೆ. ಜಯಶೀಲನ್, ಎಂ.ಡಿ. ಶಿವರಾಜು, ಎ. ಜಾರ್ಜ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement