ಚುನಾವಣಾ ಕಾರ್ಯಕ್ಕೆ 14,218 ಸಿಬ್ಬಂದಿ ನೇಮಕ
ಮೈಸೂರು: ಏ.17 ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಕರ್ತವ್ಯ ನಿರ್ವಹಿಸಲು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿ, ನೇಮಕಾತಿ ಆದೇಶವನ್ನು ಕಂದಾಯ, ನಗರಪಾಲಿಕೆ ಸಿಬ್ಬಂದಿ ಸಂಬಂಧಪಟ್ಟವರಿಗೆ ಜಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ಮತಗಟ್ಟೆಗಳಿಗೆ ಅಧ್ಯಕ್ಷಾಧಿಕಾರಿ, ಒಂದು, ಎರಡು ಹಾಗೂ ಮೂರನೇ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 14,218 ಸಿಬ್ಬಂದಿಯನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದೆ. ನೇಮಕ ಮಾಡಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ತಪ್ಪದೇ ನೇಮಕಾತಿ ಆದೇಶ ಪಡೆದುಕೊಂಡು ಸ್ವೀಕೃತಿ ನೀಡಬೇಕು. ಈ ಬಗ್ಗೆ ಕಚೇರಿಯ ಮುಖ್ಯಸ್ಥರು ವೈಯಕ್ತಿಕ ಗಮನ ಹರಿಸುವಂತೆ ಅವರು ಸೂಚಿಸಿದ್ದಾರೆ.
ಈ ಚುನಾವಣೆಯಲ್ಲಿ ನೇಮಕ ಮಾಡಿರುವ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದಲ್ಲಿಯೇ ಮತಗಟ್ಟೆ ಅಧಿಕಾರಿ, ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಲು ನೇಮಕ ಮಾಡಲಾಗುವುದು. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ (ನಂಜನಗೂಡು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ), ಮಾ.29 ರಂದು ಮೊದಲನೇ ತರಬೇತಿ ಆಯೋಜಿಸಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ತರಬೇತಿಯನ್ನು ಏ.2 ರಂದು ಆಯೋಜಿಸಿದೆ. ನೇಮಕಾತಿ ಆದೇಶದಲ್ಲಿರುವ ತರಬೇತಿ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಪ್ಪದೇ ಹಾಜರಾಗುವಂತೆ ಅವರು ತಿಳಿಸಿದ್ದಾರೆ.
ಮತಗಟ್ಟೆ ಅಧಿಕಾರಿಗಳು ಸಹ, ಮತ ಚಲಾಯಿಸಲು ಅನುಕೂಲವಾಗುವಂತೆ ಅವರಿಗೆ ನೇಮಕಾತಿ ಆದೇಶದ ಜೊತೆಯಲ್ಲಿ ವಿಧಾನಸಭಾ ಕ್ಷೇತ್ರ ಸಂಖ್ಯೆ, ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ನಮೂದಿಸಿರುವ ಫಾರಂ 12 ಮತ್ತು 12ಎ ಅನ್ನು ನೀಡಲಾಗಿದೆ. ಅದನ್ನು ಅವರು ಪರಿಶೀಲಿಸಿಕೊಂಡು ತಪ್ಪಿದಲ್ಲಿ ಸರಿಪಡಿಸಿ ಸಹಿ ಮಾಡಿ, ಅದನ್ನು ಮೊದಲನೇ ತರಬೇತಿಯಲ್ಲಿ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿ ಅಥವಾ ಅವರಿಂದ ಅಧಿಕೃತರಾಗಿರುವ ಅಧಿಕಾರಿಗಳಿಗೆ ನೀಡಬೇಕು. ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಅವರ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ತಿಳಿದುಕೊಳ್ಳಲು ್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ವೆಬ್‌ಸೈಟ್‌ನಲ್ಲಿ ಸಹ ಪರಿಶೀಲಿಸಿಕೊಳ್ಳಬಹುದು.