ಭೈರಪ್ಪ, ಆದಿಶ್ರೀಗಳಿಂದ ಆಶೀರ್ವಾದ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗುರುವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರ ಆಶೀರ್ವಾದ ಪಡೆದರು.ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದ ಪ್ರತಾಪ್ ಸಿಂಹ ಅವರು ಕುವೆಂಪುನಗರದಲ್ಲಿನ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದು, ಮಾತುಕತೆ ನಡೆಸಿದರು. ಈ ವೇಳೆ ಭೈರಪ್ಪ ಅವರು ಪ್ರತಾಪ್ ಸಿಂಹ ಅವರಿಗೆ ಸಿಹಿ ನೀಡಿ, ಶುಭ ಕೋರಿದರು. ಬಳಿಕ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಆದಿಚುಂಚನಗಿರಿ ಮೂಲಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳನ್ನು ಭೇಟಿಯಾದ ಪ್ರತಾಪ್ ಸಿಂಹ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಪ್ರತಾಪ್ಸಿಂಹ ಅವರಿಗೆ ಫಲತಾಂಬೂಲ, ಶಾಲು ಹೊದಿಸಿ ಅಭಿನಂದಿಸಿದರು.