ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು ಕ್ಷೇತ್ರ: ಎಲ್ಲ ನಾಮಪತ್ರ ಕ್ರಮಬದ್ಧ

Rashmi Kasaragodu
Updated On : 28 Mar 2014, 2:03 am

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ 22 ಮಂದಿ ಅಭ್ಯರ್ಥಿಗಳು ಸಲ್ಲಿಸಿದ ಎಲ್ಲಾ 33 ನಾಮಪತ್ರಗಳೂ ಕ್ರಮಬದ್ಧವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ, ಬಿಎಸ್ಪಿ ಅಭ್ಯರ್ಥಿ ಸಿ.ಮೋಹನ್ಕುಮಾರ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಸೇರಿದಂತೆ ಒಟ್ಟು 22 ಮಂದಿ 33 ನಾಮಪತ್ರ ಸಲ್ಲಿಸಿದ್ದರು.
ಸರ್ವಜನತಾ ಪಕ್ಷದ ತಿಮ್ಮೇಗೌಡ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ರೆಡ್ಸ್ಟಾರ್ನ ಡಿ.ಎಸ್. ನಿರ್ವಾಣಪ್ಪ, ಸಂಯುಕ್ತ ಜನತಾದಳದ ಎಸ್.ಪಿ. ಮಹದೇವಪ್ಪ, ಕರುನಾಡು ಪಕ್ಷದ ರತಿ ಪೂವಯ್ಯ, ಡೆಮಾಕ್ರೆಟಿಕ್ ಪ್ರಜಾಕ್ರಾಂತಿ ಪಕ್ಷ (ಸೆಕ್ಯೂಲರಿಸ್ಟ್) ಹುಣಸೂರು ಕೆ.ಚಂದ್ರಶೇಖರ್, ಪಕ್ಷೇತರರಾಗಿ ಅಖಿಲ್ ಅಹ್ಮದ್, ಡಿ. ಈಶ್ವರ್, ಬನ್ನೂರು ಕುಮಾರ್, ಎಂ.ಖಲೀಲ್, ಗುರುಮಲ್ಲೇಶ, ಎಂ.ಎಸ್. ಪ್ರವೀಣ್, ಭೋಜಣ್ಣ ಎಸ್. ಸೋಮಯ್ಯ, ಪಿ.ಎಸ್. ಯಡೂರಪ್ಪ, ಜಿ.ಲಿಂಗಯ್ಯ, ಆರ್.ವಿಶ್ವನಾಥ್, ಶ್ರೀನಿವಾಸ, ಎನ್. ಸಂಪತ್ತು ಅವರು ಕಣದಲ್ಲಿದ್ದಾರೆ. ಗುರುವಾರ ಎಲ್ಲಾ ನಾಮಪತ್ರಗಳ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ. ಶಿಖಾ ನೇತೃತ್ವದ ತಂಡ ಎಲ್ಲಾ ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ತಿಳಿಸಿದರು. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಅವರ ಒಂದು ನಾಮಪತ್ರದಲ್ಲಿ ಅಭ್ಯರ್ಥಿ ಸಹಿಯ ಕೆಳಗೆ ದಿನಾಂಕ ತಪ್ಪಾಗಿತ್ತು ಎಂಬ ಕಾರಣಕ್ಕೆ ಕೆಲಕಾಲ ಗೊಂದಲ ಉಂಟಾಗಿತ್ತು. ಆದರೆ ಬಳಿಕ ಗೊಂದಲ ಬಗೆಹರಿದಿದ್ದರಿಂದ ಎಲ್ಲಾ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಸಿ. ಶಿಖಾ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement