ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೋಕ ಸಮರಕ್ಕೆ ತಂತ್ರಜ್ಞಾನದ ಟಚ್

Rashmi Kasaragodu
Updated On : 28 Mar 2014, 2:03 am

ಡಿ.ಎನ್. ಮಹೇಂದ್ರ
ಮೈಸೂರು: ಲೋಕಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾದಂತೆ ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಈಗಾಗಲೆ ಎಲ್ಲಾ ಬಗೆಯ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಂಡಿವೆ. ಆದರೆ ಜೆಡಿಎಸ್ ಮಾತ್ರ ಇನ್ನೂ ತಂತ್ರಜ್ಞಾನ ಬಳಸಿಕೊಳ್ಳುವ ಸಂಬಂಧ ಯೋಜನೆ ರೂಪಿಸುತ್ತಿದೆ. ಈ ಪೈಕಿ ಬಿಜೆಪಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಮುಂದಿದೆ.
ಫೇಸ್ಬುಕ್, ಟ್ವೀಟರ್, ವಾಟ್ಸ್ಆ್ಯಪ್, ಎಸ್ಎಂಎಸ್ ಸೇವೆ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರದ ಭರಾಟೆಯನ್ನು ತೀವ್ರಗೊಳಿಸಿವೆ. ಬಿಜೆಪಿಯ ಬಹುಪಾಲು ಕಾರ್ಯಕರ್ತರು ವಾಟ್ಸ್ಆ್ಯಪ್ ಬಳಸುತ್ತಿರುವುದು ಪಕ್ಷದ ಪ್ರಯತ್ನಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿದೆ. ಮೊದಲು ಕಾರ್ಯಕರ್ತರಿಗೆ ಗುಜರಾತ್ನಲ್ಲಿ ಮೋದಿ ಸರ್ಕಾರದ ಸಾಧನೆ, ಬಿಜೆಪಿಯ ಮುಂದಿನ ಗುರಿ, ಬಿಜೆಪಿ ಅಧಿಕಾರಕ್ಕೆ ಬರಬೇಕಾದ ಅಗತ್ಯ, ಯುಪಿಎ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.
ಈ ಎಲ್ಲಾ ಮಾಹಿತಿಗಳೂ ಕಾರ್ಯಕರ್ತರ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಅಂತೆಯೇ ಪ್ರತಾಪ್ ಸಿಂಹ ಫಾರ್ ಎಂಪಿ ಹಾಗೂ ಢಿಢಿಢಿ.ಜಿಛಿ.್ಛ್ಟಟ ಹೆಸರಿನ ಫೇಸ್ಬುಕ್ನ ಮೂಲಕ ಪ್ರತಾಪ್ ಸಿಂಹ ಸಂಸತ್ ಸದಸ್ಯರಾಗಿ ಆಯ್ಕೆ ಆಗಬೇಕಾದ ಅಗತ್ಯ ಮತ್ತು ಅವರ ಸಾಧನೆ, ದಿನ ನಿತ್ಯದ ಪ್ರಚಾರ ಕಾರ್ಯ ಹಾಗೂ ಸಾರ್ವಜನಿಕರಿಂದ ದೊರಕುತ್ತಿರುವ ಜನ ಬೆಂಬಲ ತಿಳಿಸಲಾಗುತ್ತಿದೆ. ನಮೋ ಫಾರ್ ಪಿಎಂ, ಸಿಂಹ ಫಾರ್ ಎಂಪಿ, ಪ್ರತಾಪ್ ಅಕ್ಷರಗಳಲ್ಲಿ ಅರಳಿದ ದೇಶಭಕ್ತಿ ಘಮ ಸಂಸತ್ತಿನಲ್ಲಿಯೂ ಅನುರಣಿಸಲಿ ಎಂಬ ಘೋಷಣೆ ಮೊಳಗುತ್ತಿದೆ.
ಸಂದೇಶದಲ್ಲೂ ಮುಂದು: ಇದರ ಜೊತೆಗೆ ಎಸ್ಎಂಎಸ್ ಸೇವೆಯನ್ನು ಆರಂಭಿಸುತ್ತಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮೂರರಿಂದ ನಾಲ್ಕು ಎಲ್ಇಡಿ ಪರದೆಯುಳ್ಳ ವಾಹನಗಳು ಮೈಸೂರಿಗೆ ಆಗಮಿಸುತ್ತಿವೆ. ಅವುಗಳ ಮೂಲಕ ಮೋದಿ ಭಾಷಣದ ತುಣುಕುಗಳು, ಗುಜರಾತ್ನಲ್ಲಿ ಜಾರಿಗೊಳಿಸಿರುವ ಜನಪರ ಯೋಜನೆಗಳು ಮತ್ತು ಮುಂದಿನ ಉದ್ದೇಶ, ಯುಪಿಎ ಸರ್ಕಾರದ ವೈಫಲ್ಯ ಬಿಂಬಿಸುವ ಕಿರು ಚಿತ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರಚಾರ ಮಾಡಲು ಪಕ್ಷ ತೀರ್ಮಾನಿಸಿದೆ. ಅಲ್ಲದೆ ಟ್ವೀಟ್ಗೆ ಣಠ್ಠಛಝಿಛಠಡ್ಝಝಛ4ಟಠ ಎಂಬ ಖಾತೆಯನ್ನು ತೆರೆಯಲಾಗಿದೆ.
ಇದೆ ಮಾದರಿಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ನಾಲ್ಕು ತಿಂಗಳ ಹಿಂದೆಯೆ ನಿಮ್ಮ ವಿಶ್ವನಾಥ್ ಹೆಸರಿನಲ್ಲಿ ಅಂತರ್ಜಾಲ ತಾಣವನ್ನು ಅಸ್ತಿತ್ವಕ್ಕೆ ತಂದಿದೆ. ಅದರಲ್ಲಿ ವೈಯಕ್ತಿಕ ವಿವರ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷಗಳ ಸಾಧನೆ, ಮುಂದಿನ ದೂರದೃಷ್ಟಿ, ಫೋಟೋ ಗ್ಯಾಲರಿ, ದೂರುಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ. ವಿಶೇಷವೆಂದರೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಈ ಎಲ್ಲಾ ಮಾಹಿತಿ ಲಭ್ಯವಿದೆ. ವೆಬ್ಸೈಟ್ ಮೂಲಕವೆ ಫೇಸ್ಬುಕ್ಗೆ ಸಂಪರ್ಕ, ಲೈವ್ ಚಾಟಿಂಗ್, ಣಟ್ಝಿಟಟಛಢ್ಝಝಢಿಛಟಿಛಝಿಛ, ವಾಟ್ಸ್ಆ್ಯಪ್, ಯುಟ್ಯೂಬ್ಗೂ ಲಿಂಕ್ ಪಡೆಯಬಹುದು.
ಇದರ ಜೊತೆಗೆ ಪ್ರತಿನಿತ್ಯ ಎಫ್ಎಂ ಮೂಲಕ ಪ್ರಚಾರದ ಭರಾಟೆಯಲ್ಲಿ ತೊಡಗಿದೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕರಿಗೆ ಎಸ್ಎಂಎಸ್ ಕಳುಹಿಸುವುದು ಹಾಗೂ ವಾಯ್ಸ್ ಕಾಲ್ ಮೂಲಕ ಮತದಾರರನ್ನು ಸಂಪರ್ಕಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಆದರೆ ಜೆಡಿಎಸ್ ತಂತ್ರಜ್ಞಾನ ಬಳಕೆ ಸಂಬಂಧ ಈಗಷ್ಟೆ ಯೋಜನೆ ರೂಪಿಸಬೇಕು. ಸಭೆಯ ನಂತರ ಮುಂದಿನ ಕಾರ್ಯಕ್ರಮ ರೂಪಿಸುವುದಾಗಿ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement