ವೈದ್ಯರು, ತಾಯಂದಿರ ನಡುವೆ ಮುಕ್ತ ಸಂವಾದ
ಮೈಸೂರು: ಹಿಮಾಲಯ ಸಂಸ್ಥೆಯು ನಗರದಲ್ಲಿ ಮಂಗಳವಾರ ವೈದ್ಯರು ಮತ್ತು ತಾಯಂದಿರ ನಡುವೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.
ಹಿಮಾಲಯ ಡ್ರಗ್ ಕಂಪನಿಯ ಫಾರ್ಮಾಸ್ಯೂಟಿಕಲ್ ವಿಭಾಗದ ಬಿಸಿನೆಸ್ ಮುಖ್ಯಸ್ಥ ಮುಖೇಶ್ ಪಾಟ್ನಿ ಮಾತನಾಡಿ, ಈ ಸಂವಾದವು ತಾಯಂದಿರಿಗೆ ತಂತಮ್ಮ ಮಕ್ಕಳ ಆರೋಗ್ಯ ಮತ್ತು ಪೋಷಣೆ, ಆರೈಕೆ ಬಗ್ಗೆ ನುರಿತ ವೈದ್ಯರ ಜೊತೆಗೂಡಿ ಚರ್ಚಿಸಿ ಆ ನಿಟ್ಟಿನಲ್ಲಿ ಅವರು ನೀಡುವ ಮಾರ್ಗದರ್ಶನಕ್ಕೆ ಅನುಗುಣವಾಗಿ ಚರ್ಚಿಸಲು ಸೂಕ್ತ ವೇದಿಕೆ ಆಗಿದೆ ಎಂದರು.
ಡಾ.ಜಯಶ್ರೀ ಕೇಶವ್ ಮಾತನಾಡಿ, ಆಯುರ್ವೇದದ ಪ್ರಾಮುಖ್ಯತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಕೇವಲ ಮಕ್ಕಳಿಗೆ ಜನ್ಮ ನೀಡಿದ ಕ್ಷಣದಿಂದ ತಾಯಂದಿರ ಪಾತ್ರ ಮುಗಿಯುವುದಿಲ್ಲ. ಬದಲಾಗಿ ಆಕೆ ತನ್ನ ಮಗುವನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂಬುದು ಮುಖ್ಯ ಎಂದು ಹೇಳಿದರು. ಮಕ್ಕಳ ತಜ್ಞ ಡಾ.ಮಹೇಶ್ ಕುಮಾರ್, ಡಾ.ಪ್ರದೀಪ್ ಅವರು 25 ಮಂದಿ ತಾಯಂದಿರಿಗೆ ಮಕ್ಕಳ ದೇಹದ ಮಸಾಜಿಂಗ್ ಕುರಿತು ಮಾಹಿತಿ ನೀಡಿದರು.