ಜೂಜಾಡುತ್ತಿದ್ದವರ ಬಂಧನ
ಟಿ. ನರಸೀಪುರ: ಹೊಸ ತಿರುಮಕೂಡಲಿನ ಹುಣಸೂರು ಮುಖ್ಯರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಐವರು ಜೂಜುಕೋರರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ಹಣ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಎಸ್.ಕೆ. ಶಶಿಕುಮಾರ್ ನೇತೃತ್ವದಲ್ಲಿ ಜೂಜಾಟದ ಮೇಲೆ ದಾಳಿ ಮಾಡಿದ ಪೊಲೀಸರು, ತಿರುಮಕೂಡಲಿನ ಕುಳ್ಳೇಗೌಡ ಎಂಬವರ ಪುತ್ರ ನಾಗೇಗೌಡ, ಮಹದೇವು ಪುತ್ರ ಜಗದೀಶ್, ಮಹದೇವ ಅವರ ಪುತ್ರ ಅಶೋಕ, ಚೌಡಯ್ಯ ಪುತ್ರ ಲೋಕೇಶ ಹಾಗೂ ಜವರಯ್ಯ ಎಂಬವರ ಪುತ್ರ ಶೇಖರನನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ 2,940 ನಗದು, ಟಿವಿಎಸ್ ಮೊಪೆಡ್ ಮತ್ತು ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡರು.
ಕಾರ್ಯಾಚರಣೆಯಲ್ಲಿ ಪೇದೆಗಳಾದ ಜವರಪ್ಪ, ಅಹಮದ್ ಪಾಷ, ರಾಜಶೇಖರ, ಶಿವಸ್ವಾಮಿ, ರವಿ, ಚಾಲಕ ಸುರೇಶ್ರಾವ್ ಭಾಗವಹಿಸಿದ್ದರು