ನಗರದಲ್ಲಿ ಪೊಲೀಸರಿಂದ ಪಥಸಂಚಲನ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. ಸೂಕ್ಷ್ಮ ಪ್ರದೇಶಗಳಾದ ಕೆ.ಎನ್. ಪುರ, ಕ್ಯಾತಮಾರನಹಳ್ಳಿ, ಉದಯಗಿರಿ, ಶಾಂತಿನಗರ ಹಾಗೂ ಇತರೆಡೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಸ್.ಎಸ್. ಮಹದೇವಯ್ಯ ನೇತೃತ್ವದಲ್ಲಿ ಕೆಎಸ್ಆರ್ಪಿ, ಕೇರಳದಿಂದ ಆಗಮಿಸಿರುವ ಸಿಐಎಸ್ಎಫ್, ಅಶ್ವದಳ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಶಾಂತಿಯುತ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಕರೆ ನೀಡಲಾಯಿತು. ಚುನಾವಣೆ ವೇಳೆ ಕೋಮು ಸೌಹಾರ್ದತೆ ಕಾಪಾಡುವುದು, ಗಲಭೆಗ ಅವಕಾಶ ನೀಡದಿರುವುದು, ಪ್ರತಿಯೊಬ್ಬರು ಕಡ್ಡಾಯ ಮತದಾನದಲ್ಲಿ ಭಾಗವಹಿಸುವಂತೆ ತಿಳಿಸಲಾಯಿತು. ಅಲ್ಲದೇ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಕಟ್ಟೆಚ್ಚರ ನೀಡಲಾಯಿತು.