ಪ್ರಚಾರಕ್ಕೆ ಚಾಲನೆ
ಭೇರ್ಯ: ಹೊಸಅಗ್ರಹಾರ ಹೋಬಳಿಯ ಮಾರಗೌಡನಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಂಡ್ಯ ಲೋಕಸಭಾ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಪರ ಶಾಸಕ ಸಾ.ರಾ. ಮಹೇಶ್ ಶುಕ್ರವಾರ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಸಾಥ್ ನೀಡಿದರು. ಹೊಸಅಗ್ರಹಾರ ಹೋಬಳಿಯ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಸಾ.ರಾ.ಮಹೇಶ್ ಅಭಿಮಾನಿಗಳು ಭಾಗವಹಿಸಿ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರವಾಗಿ ಮಾರಗೌಡನಹಳ್ಳಿ, ಭೇರ್ಯದಲ್ಲಿ ಪ್ರಚಾರ ಮಾಡಿದರು.