ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಅಭಿವೃದ್ಧಿಗೆ ಅಧ್ಯಾಪಕರ ನಿಸ್ವಾರ್ಥ ಸೇವೆ ಅನನ್ಯ'

Rashmi Kasaragodu
Updated On : 30 Mar 2014, 2:06 am

ಮೈಸೂರು: ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಅಧ್ಯಾಪಕರ ಸೇವೆ ಅನನ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಹೇಳಿದರು. ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜವರೇಗೌಡ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಪೂಜಾ ಭಗವತ್ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಸಿ.ಕೆ. ರೇಣುಕಾರ್ಯ, ಅಧ್ಯಾಪಕರ ವೃತ್ತಿಗೆ ನಿವೃತ್ತಿಯೇ ಇಲ್ಲ. ಇದು ಕೇವಲ ಸಂಸ್ಥೆಯಲ್ಲಿನ ಉದ್ಯೋಗಕ್ಕೆ ನಿವೃತ್ತಿಯಷ್ಟೆ. ಇದನ್ನು ನಿರಂತರವಾಗಿ ನಡೆಸಿಕೊಂಡು ಬರಬಹುದಾಗಿದೆ. ನಿವೃತ್ತಿಯಾಗಿರುವ  ಜವರೇಗೌಡ ಪ್ರವೃತ್ತಿಯಾಗಿ ತಮ್ಮ ಕಾಯಕ ಮುಂದುವರಿಸಲಿ ಎಂದರು.  ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಮಾಜಿ ಮೇಯರ್ ಪಿ. ವಿಶ್ವನಾಥ್, ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ, ಪ್ರಾಂಶುಪಾಲೆ ಪಾರ್ವತಿ ಇದ್ದರು.

ಒಡಿಪಿ ಸಂಸ್ಥೆಯಲ್ಲಿ ಮತದಾನ ಜಾಗೃತಿ


ಮೈಸೂರು: ಒಡಿಪಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ಸುಮಾರು 130 ಸಿಬ್ಬಂದಿ ವರ್ಗದವರಿಗೆ ಸ್ವೀಪ್ ಸದಸ್ಯರ ಮುಖಾಂತರ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವ ಹಕ್ಕಿನ ಅರಿವನ್ನು ಮೂಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ಆರ್. ವಿಜಯ್ ಮಾತನಾಡಿ, ಒಡಿಪಿ ಸಂಸ್ಥೆಯ ಕೇಂದ್ರ ಸಂಯೋಜಕರು ಕಾರ್ಯಕರ್ತರ ಮುಖಾಂತರ ಸುಮಾರು 7,500 ಜನರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು. ಸಂಸ್ಥೆಯಲ್ಲಿ ಸಿಬ್ಬಂದಿಯ ಪ್ರತಿಕ್ರಿಯೆ ಹಾಗೂ ಉತ್ತಮ ಆಡಳಿತಕ್ಕೆ ಇರುವ ಕಾಳಜಿಯನ್ನು ಪ್ರಶಂಸಿದರು. ಜಿಪಂ ಸಹಾಯಕ ಕಾರ್ಯಕ್ರಮಾಧಿಕಾರಿ ರಾಜಶೇಖರ್ ಮಾತನಾಡಿ, ಒಡಿಪಿ ಎಲ್ಲ ಸಿಬ್ಬಂದಿ ಚುನಾವಣಾ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಈ ವೇಳೆ ನಿರ್ದೇಶಕರಾದ ವಂ.ಸ್ವಾ.ಸ್ಟ್ಯಾನಿ. ಡಿ. ಅಲ್ಮೆಡಾ ಮತ್ತಿತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement