ಕಳಪೆ ಕಾಮಗಾರಿ: ಗ್ರಾಮಸ್ಥರ ಧರಣಿ
ಬೈಲುಕುಪ್ಪೆ: ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿರುವ ಘಟನೆ ಸಮೀಪದ ಹೊನ್ನಾಪುರ ಗ್ರಾಮದಲ್ಲಿ ಶನಿವಾರ ಜರುಗಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಮಂಜು ಮಾತನಾಡಿ, ಹೊನ್ನಾಪುರ ಗ್ರಾಮದಿಂದ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಇದಾಗಿದ್ದು, ಈ ಕಾಮಗಾರಿಯನ್ನು ಕುಶಾಲನಗರದ ಕಾವೇರಿ ನೀರಾವರಿ ನಿಗಮ ಮಂಡಳಿಗೆ ವಹಿಸಿದ್ದು, ಇದರ ಅಂದಾಜು ವೆಚ್ಚ 5 ಲಕ್ಷ ರು. ಗಳೆಂದು ತಿಳಿದು ಬಂದಿದೆ. ಎಂಜಿನಿಯರ್ ರು. 5 ಲಕ್ಷ ಮಂಜೂರಾಗಿದೆ ಎಂದು ಹೇಳಿ ಮಣ್ಣಿನ ಮೇಲೆ ಜಲ್ಲಿ ಕಲ್ಲನ್ನು ಹಾಕಿ ಅದರ ಮೇಲೆ ವೇಸ್ಟ್ ಆಯಿಲ್ ಸುರಿದು ಮಿಶ್ರಣ ಮಾಡಿ ರಸ್ತೆ ಮಾಡುತ್ತಿದ್ದಾರೆ ಎಂದು ದೂರಿದರು. ರಾಜೇಗೌಡ, ಜಲೇಂದ್ರ, ಶ್ರೀನಿವಾಸ್, ಹರೀಶ, ಅಶೋಕ್, ನಾಗರಾಜ್, ಕೃಷ್ಣೇಗೌಡ, ಕುಮಾರ್, ವಿನಯಕುಮಾರ್ ಇದ್ದರು.