ಕಾಂಗ್ರೆಸ್ ಒಂದು ವರ್ಗಕ್ಕೆ ಸೀಮಿತವಲ್ಲ'
ತಾಂಡವಪುರ: ಕಾಂಗ್ರೆಸ್ ಒಂದು ವರ್ಗಕ್ಕೆ ಸೇರಿದ ಪಕ್ಷವಲ್ಲ, ಅದು ಎಲ್ಲ ವರ್ಗಕ್ಕೂ ಸೇರಿದ ಪಕ್ಷ ಎಂದು ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರಕ್ಕೆ ಸೇರುವ ದಾಸನೂರು ಗ್ರಾಪಂ ವ್ಯಾಪ್ತಿಗೆ ಬರುವ ತೊರವಳ್ಳಿ, ತೊರವಳ್ಳಿ ಮೋಳೆ, ಅಂಕುಶರಾಯನ ಪುರ, ಚಿಕ್ಕಹೊಮ್ಮ, ದೊಡ್ಡಹೊಮ್ಮ ಹಾಗೂ ಮುಂತಾದ ಗ್ರಾಮಗಳಲ್ಲಿ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಪರ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದರು. ತಾಪಂ ಸದಸ್ಯರಾದ ಗೋವಿಂದರಾಜು, ತಗಡೂರು ಕಾಂಗ್ರೆಸ್ ಅಧ್ಯಕ್ಷ ಕೆ. ರಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಧರ್ಮೇಂದ್ರ ರಾಜು, ಕಾಂಗ್ರೆಸ್ ಮುಖಂಡರಾದ ಟಿ.ಕೆ. ಮಾಲೇಗೌಡ, ನಾಗೇಶ್, ಸಿ.ಆರ್. ಮಹದೇವು, ಬಸವೇಗೌಡ, ಪರಶಿವಮೂರ್ತಿ, ಬೋರೇಗೌಡ, ಬಸವರಾಜಪ್ಪ, ಮಹದೇವಪ್ಪ ಇದ್ದರು.