ದತ್ತು ಸ್ವೀಕಾರ
ಮೈಸೂರು: ಬೆಂಗಳೂರಿನ ಜೆ. ಸಿದ್ಧಾರ್ಥ ಹಾಗೂ ಜೆ. ವೆನ್ನೆಲ್ಲಾ ಎಂಬವರು ತಲಾ ರು. 3,500 ಪಾವತಿಸಿ ಒಂದೊಂದು ಕಾಳಿಂಗ ಸರ್ಪವನ್ನು ದತ್ತು ಪಡೆದಿದ್ದಾರೆ. ಅವರನ್ನು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಅಭಿನಂದಿಸಿದ್ದಾರೆ.
ನೇಮಕ
ಹಿಂದುಳಿದ ವರ್ಗಗಳ ಅಭಿವೃದ್ಧಿ ವೇದಿಕೆ ಗೌರವಾಧ್ಯಕ್ಷರಾಗಿ ಎ. ಗೋಪಾಲಾಚಾರ್, ಅಧ್ಯಕ್ಷರಾಗಿ ಎಂ.ಕೆ.ಕೆ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮಹದೇವ್, ಖಜಾಂಚಿಯಾಗಿ ಅಬ್ಬಯ್ಯ, ಹಿರಿಯ ಉಪಾಧ್ಯಕ್ಷರಾಗಿ ಪಿ. ಕುಮಾರ್, ಉಪಾಧ್ಯಕ್ಷರಾಗಿ ಎ.ಎನ್. ಚಂದ್ರು, ಎನ್. ಸ್ವಾಮಿ, ಕೃಷ್ಣಾಚಾರ್, ಸಹ ಕಾರ್ಯದರ್ಶಿಯಾಗಿ ಭೀಮಣ್ಣ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜಣ್ಣ, ಸಂಚಾಲಕರಾಗಿ ಸುರೇಶ್, ನಿರ್ದೇಶಕರಾಗಿ ಎಸ್.ಪಿ. ಪ್ರಕಾಶ್, ಬಿ. ಸಿದ್ದರಾಜು, ಚಾಮರಾಜು, ಸಣ್ಣಪ್ಪ, ವೆಂಕಟೇಶ್, ಸದಾನಂದ, ಮುರುಗೇಶ್, ಎಸ್. ಚಂದ್ರು, ರೇವಣ್ಣ, ಮಂಜು, ಯತೀಶ್ಕುಮಾರ್ ನೇಮಿಸಲಾಗಿದೆ.
ಕಾರ್ಯಕ್ರಮ
ಮೈಸೂರು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗಂಗೋತ್ರಿ ಘಟಕವು ಮಾ.30ರ ಬೆಳಗ್ಗೆ 7ಕ್ಕೆ ಮರ ಗಿಡಗಳ ಪರಿಚಯ ಕಾರ್ಯಕ್ರಮವನ್ನು ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಆಯೋಜಿಸಿದೆ. ಸಸ್ಯ ವಿಜ್ಞಾನಿ ಡಾ. ಮಹದೇಶ್ವರಸ್ವಾಮಿ ನಡೆಸಿಕೊಡುವರು. ಮೈಸೂರು ವಿವಿ ರೈಲ್ವೆ ಗೇಟ್ ಬಳಿಯಿಂದ ಆರಂಭವಾಗಲಿದೆ. ವಿವರಕ್ಕೆ ಮೊ. 94490 47132.