ಬಣ್ಣದ ಗಣೇಶ ನಿಷೇಧಕ್ಕೆ ಮನವಿ
ಮೈಸೂರು: ಪಕ್ಕದ ರಾಜ್ಯಗಳಿಂದ ಬರುವ ಬಣ್ಣ ಹಚ್ಚಿದ ಗಣೇಶ ವಿಗ್ರಹಗಳನ್ನು ತರದಂತೆ ಹಾಗೂ ನಮ್ಮ ರಾಜ್ಯದಲ್ಲಿ ಬಣ್ಣವಿಲ್ಲದ ಗಣೇಶ ವಿಗ್ರಹಗಳನ್ನು ಮಾರುಕಟ್ಟೆಯಲ್ಲಿ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಮಾನಾಥ್ ರೈ ಅವರಿಗೆ ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿಯ ಸಂಚಾಲಕ ಕೆ.ಎಂ. ಜಯರಾಮಯ್ಯ ಮನವಿ ಮಾಡಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಅವರು ಕೋರಿದ್ದಾರೆ.
ಕದಂಬ ತಂಡಕ್ಕೆ ಪ್ರಥಮ ಬಹುಮಾನ
ಮೈಸೂರು: ಎಚ್.ಡಿ. ಕುಮಾರಸ್ವಾಮಿ ಮತ್ತು ಸಿ. ಮಹದೇಶ ಅಭಿಮಾನಿಗಳ ಬಳಗವು ಒಂಟಿಕೊಪ್ಪಲಿನ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ನಡೆಸಿದ ಕಬಡ್ಡಿ ಪಂದ್ಯಾವಳಿಯಲ್ಲಿ ಕದಂಬ ತಂಡವು ಪವರ್ ಕಪ್ ಗೆಲ್ಲುವ ಮೂಲಕ 20 ಸಾವಿರ ನಗದು ಬಹುಮಾನ ಪಡೆದುಕೊಂಡಿತು. ಉಳಿದಂತೆ ಭರತ್ ಬಾಯ್ಸ್ ತಂಡಕ್ಕೆ ಎರಡನೇ ಸ್ಥಾನ, ವಿವಿ ಮೊಹಲ್ಲಾ ಯುವ ಸಮಿತಿಗೆಮೂರನೇ ಸ್ಥಾನ, ಕುಂಬಾರಕೊಪ್ಪಲಿನ ಬಳಗಕ್ಕೆ ನಾಲ್ಕನೇ ಸ್ಥಾನ ಪಡೆದಿವೆ.