ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತದಾನ ಜಾಗೃತಿ ಜಾಥಾ

Rashmi Kasaragodu
Updated On : 30 Mar 2014, 2:08 am

ರಾವಂದೂರು: ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಸಿಡಿಪಿಒ ದೇವಕುಮಾರ್ ಕಿವಿಮಾತು ಹೇಳಿದರು.
ಗ್ರಾಮದಲ್ಲಿ ನಡೆದ ಮತದಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಮತದಾನ ಪ್ರಜಾಪ್ರಭುತ್ವದ ಮುಖ್ಯ ಅಂಶವಾಗಿದ್ದು, ಇದನ್ನು ಎಲ್ಲರೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜಾಪ್ರಭುತ್ವದ ತತ್ವ ಎತ್ತಿ ಹಿಡುಯುವಂತಾಗಬೇಕು ಎಂದು ತಿಳಿಸಿದರು.
ಉಪತಹಸೀಲ್ದಾರ್ ಸಣ್ಣ ರಾಮಪ್ಪ ಮಾತನಾಡಿ, ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಎಲ್ಲರೂ ಮತದಾನಕ್ಕೆ ಮುಂದಾಗಬೇಕು. ಮತದಾನದಿಂದ ಏನು ಲಾಭ ಎಂಬ ತಿರಸ್ಕಾರ ದೂರ ಮಾಡಿ, ಜವಾಬ್ದಾರಿಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.  
ಡಾ. ಪುನೀತ್, ಎಸಿಡಿಪಿಒ ಇಂದಿರಾ, ಮೇಲ್ವಿಚಾರಕಿ ಶ್ವೇತಾ, ಗ್ರಾಮಲೆಕ್ಕಿಗ ಕೋಟೇಗೌಡ, ಮಹೇಂದ್ರ, ಶ್ರೀಕಂಠಾರಾಧ್ಯ, ರಾಜಮಣಿ ಇದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement