ಮುಕ್ತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸೂಚನೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ 2013-14ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಖುದ್ದಾಗಿ ವಿತರಿಸುವ, ಅಂಚೆ ಮೂಲಕ ರವಾನಿಸುವ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಧ್ಯಯನ ಸಾಮಗ್ರಿಯ ಉಪ ಕುಲಸಚಿವ ಡಾ.ಎಂ.ಎಚ್. ಕೃಷ್ಣಪ್ಪ ಹೇಳಿದ್ದಾರೆ. ಕೆಲವು ವಿದ್ಯಾರ್ಥಿಗಳ ಅಧ್ಯಯನ ಸಾಮಗ್ರಿಗಳು ಸ್ವ-ವಿಳಾಸದಲ್ಲಿರದ ಕಾರಣ, ವಿಳಾಸ ಬದಲಾವಣೆ ಅಥವಾ ಇನ್ನಿತರೆ ಕಾರಣಗಳಿಂದ ವಿದ್ಯಾರ್ಥಿಗಳಿಗೆ ತಲುಪದೆ ವಿವಿ ನಿಲಯದ ಕೇಂದ್ರಸ್ಥಾನಕ್ಕೆ ಹಿಂದಿರುಗಿ ಬಂದಿರುತ್ತವೆ. ಅಂತಹ ವಿದ್ಯಾರ್ಥಿಗಳ ವಿವರಗಳನ್ನು ವಿವಿಯ ನಿಲಯದ ವೆಬ್ಸೈಟ್ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿನಲ್ಲಿ ಪ್ರಕಟಿಸುವ ಜೊತೆಗೆ ಆಯಾಯ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳಿಗೆ ವಿವಿ ನಿಲಯದಿಂದ ಎಸ್ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗಿದೆ.