ಮುಬೀನ್ ತಾಜ್ ಗ್ರಾಪಂ ಅಧ್ಯಕ್ಷೆ
ಟಿ. ನರಸೀಪುರ: ಶನಿವಾರ ನಡೆದ ಚುನಾವಣೆಯಲ್ಲಿ ಭೈರಾಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಮುಬೀನ್ತಾಜ್ ಅವಿರೋಧ ಆಯ್ಕೆಯಾದರು. ತಾಲೂಕಿನ ಭೈರಾಪುರ ಗ್ರಾಪಂನ ಹಿಂದಿನ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮುಬೀನ್ತಾಜ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಾಪಂ ಇಒ ಜೈಕೃಷ್ಣ ಅವಿರೋಧ ಆಯ್ಕೆ ಪ್ರಕಟಿಸಿದರು. ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಪಿ. ಪುಟ್ಟರಾಜು, ಗ್ರಾಪಂ ಉಪಾಧ್ಯಕ್ಷ ಪುಟ್ಟು, ಪಿಡಿಒ ಅಮ್ಜದ್ಪಾಷ, ಮಾಜಿ ಅಧ್ಯಕ್ಷ ಕರಿಯಪ್ಪ, ನಾಗರಾಜು, ಸದಸ್ಯರಾದ ಆರ್.ನಂಜಯ್ಯ, ರಾಚಯ್ಯ, ವಿಷಕಂಠಮೂರ್ತಿ, ಪ್ರಕಾಶ್, ಬಿ.ಎಲ್. ಮಹದೇವ್, ಸೋಮಶಂಕರ್, ಹೇಮಂತ್ಕುಮಾರ್, ಎಂ. ಮಿಥುನ್, ಎಂ. ರಮೇಶ್, ಎಸ್. ಲಕ್ಷ್ಮೀ, ಪಾರ್ವತಿ, ವಸಂತಮ್ಮ ಇದ್ದರು.