ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ

Rashmi Kasaragodu
Updated On : 30 Mar 2014, 11:35 am

ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿ ಮತ್ತು ಬಾಬು ಜಗಜೀವನರಾಮ್ ಭವನದ ಕಾಮಗಾರಿಗಳು ಕಳಪೆ ಮತ್ತು ನಿಧಾನಗತಿಯಲ್ಲಿ ನಿರ್ಲಕ್ಷ್ಯತೆಯಿಂದ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಧೋರಣೆಯೂ ಕಾರಣ. ರಾಷ್ಟ್ರನಾಯಕರ ಭವನಗಳನ್ನು ನಿರ್ಮಾಣ ಮಾಡುವಂತೆ ಕಳೆದ 10 ವರ್ಷಗಳಿಂದಲೂ ದಸಂಸ ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಿತು. ಎಂಡಿಎ ಅಧಿಕಾರಿಗಳು ಕಾಲಮಿತಿಯೊಳಗೆ ಕೆಲಸ ಮುಗಿಸದೆ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸಮಾಜ ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಂಬೇಡ್ಕರ್, ಬಾಬು ಜಗಜೀವನರಾಮ್ ಬಗೆಗೆ ಉದ್ದುದ್ದ ಭಾಷಣ ಮಾಡುವ ಇವರು ಕಾಮಗಾರಿಯನ್ನು ತ್ವರಿತವಾಗಿ ಮಾಡಿಸದೆ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಮಂತ್ರಿ, ಭವನ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ನಾವು ಹೋರಾಟ ನಡೆಸಬೇಕಾಗುತ್ತದೆ.
 ನಿಂಗರಾಜ್ ಮಲ್ಲಾಡಿ, ಎಚ್.ಪಿ. ದಿವಾಕರ್, ಪೇಪರ್ ರಾಜಣ್ಣ, ವೈ. ಕುಮಾರ, ದಸಂಸ ಸಂಚಾಲಕರು



ಸಬ್‌ವೇ ನಿರ್ಮಿಸಿ
ಮೈಸೂರು ನಗರದ ಹೃದಯಭಾಗದ ಕೆ.ಆರ್. ವೃತ್ತದ ಮೂರು ಭಾಗದಲ್ಲಿ ಸಬ್‌ವೇ ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಪಾದಚಾರಿ ರಸ್ತೆ ದಾಟಲು ಸಹಕಾರಿಯಾಗುವ ಸಲುವಾಗಿ ವೃತ್ತದ ಉತ್ತರದ ಕಡೆಗೆ, ದಕ್ಷಿಣದ ಕಡೆಗೆ ಹಾಗೂ ಪೂರ್ವ ಭಾಗದಲ್ಲಿ ಸಬ್‌ವೇ ನಿರ್ಮಾಣ ಮಾಡಲು ಸಾರ್ವಜನಿಕರ ಪರವಾಗಿ ಮನವಿ ಮಾಡುತ್ತೇನೆ.
 ಎಂ.ವಿ. ಮುರಳೀಧರ, ಹಿರಿಯ ನಾಗರಿಕ


ಸ್ಕೌಟ್ಸ್ ಮೈದಾನ
ಮೈಸೂರು ಜಿಲ್ಲಾಧಿಕಾರಿ ಕಚೇರಿ ಹಿಂಭಾಗವಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನವನ್ನು ಪ್ರತಿಬಾರಿ ಚುನಾವಣಾ ಪ್ರಕ್ರಿಯೆಗಳಿಗೆ ಬಳಸಿಕೊಳ್ಳುವುದು ವಾಡಿಕೆ. ಆದರೆ, ಮೈದಾನದ ಆಡಳಿತ ಮಂಡಳಿಯನ್ನು ಕೇಳಿದರೆ ಈ ಬಾರಿ ಚಿಣ್ಣರ ಮೇಳ ನಡೆಸಲು ನೀಡಲಾಗಿದೆ ಎಂಬ ಉತ್ತರ ನೀಡುತ್ತಾರೆ. ಅಂದರೆ ಚುನಾವಣಾ ಪ್ರಕ್ರಿಯೆಗಳ ಉಸ್ತುವಾರಿ ಹೊತ್ತಿರುವ ಜಿಲ್ಲಾಧಿಕಾರಿಗಳಿಗೆ ಮೈದಾನವನ್ನು ಚಿಣ್ಣರ ಮೇಳ ನಡೆಸಲು ನೀಡಿರುವುದು ಗಮನಕ್ಕೆ ಬಂದಿಲ್ಲವೇ
  ರವೀಂದ್ರ ಜೋಶಿ, ಪತ್ರಕರ್ತರು


ಬಿಗಡಾಯಿಸಿರುವ ವಿದ್ಯುತ್ ಸಮಸ್ಯೆ
ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದಲ್ಲಿ ಕಳೆದ ಎರಡು ಮೂರು ವಾರಗಳಿಂದ ಹಗಲು ರಾತ್ರಿಯನ್ನದೆ ಅನೇಕ ಬಾರಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಈಗ ಮಾರ್ಚ್ ತಿಂಗಳಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ. ಇವರು ಓದಲು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈಗ ಬೇಸಿಗೆ ಸಮಯ ಇರುವುದರಿಂದ ವಿದ್ಯುತ್ ಲೋಡ್ ಜಾಸ್ತಿಯಾಗಿದೆ. ಆದ್ದರಿಂದ ಲಭ್ಯವಿರುವ ವಿದ್ಯುತ್ ಅನ್ನು ಸಮಾನಾಗಿ ಎಲ್ಲಾ ಹಳ್ಳಿಗಳಿಗೂ ಹಂಚುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಈ ಮೂಲ ಸಮಸ್ಯೆ ಇರುವುದು ಅಂತರಸಂತೆಯಲ್ಲಿ. ಅಂತರಸಂತೆ ಹೋಬಳಿಯು ತಾಲೂಕಿನಲ್ಲಿ ಹಿಂದುಳಿದ ಹೋಬಳಿಯಾಗಿದ್ದು, ಹೆಚ್ಚಿನ ಜನರು ತಮ್ಮ ಜಮೀನಿನಲ್ಲಿ ಪಂಪ್‌ಣಸೆಟ್ ಅಳವಡಿಸಿದ್ದು, ಈ ಜಾಗಗಳನ್ನು ಕೇರಳ ರಾಜ್ಯದ ಶುಂಠಿ ವ್ಯಾಪಾರಿಗಳಿಗೆ ಗುತ್ತಿಗೆ ನೀಡಿರುವುದರಿಂದ ಈ ಮಲಯಾಳಿಗಳು ರಾತ್ರಿ ವೇಳೆ 2 ಫೇಸ್ ವಿದ್ಯುತ್‌ಗೆ ಕಂಡೆನ್ಸರ್ ಉಪಯೋಗಿಸಿ ವಿದ್ಯುತ್ ಅನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕೆಇಬಿ ಇಲಾಖೆಯು ಕಣ್ಣು ಮುಚ್ಚಿ ಕುಳಿತಿದ್ದು, ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರು ಹಾಗೂ ಜನರ ದಿನನಿತ್ಯದ ಮಿಲ್ಲು ಮತ್ತು ಇತರೆ ಕೆಲಸಗಳಿಗೆ ತೊಂದರೆಯಾಗಿದೆ. ಆದುದರಿಂದ ಇಲಾಖೆ ಎಚ್ಚೆತ್ತುಕೊಂಡು ಕೇರಳ ರಾಜ್ಯದ ಶುಂಠಿ ವ್ಯಾಪಾರಿಗಳನ್ನು ಪರಿಶೀಲಿಸಿ ಇವರಿಗೆ ದಂಡ ವಿಧಿಸಬೇಕು.
 ಎಂ. ಮಹದೇವಪ್ಪ, ಗ್ರಾಮಸ್ಥ

ಬೆಟ್ಟದಹೊಸೂರು ವಿದ್ಯುತ್ ತೊಂದರೆ
ಟಿ. ನರಸೀಪುರ ತಾಲೂಕಿನ ತಲಕಾಡು ಹೋಬಳಿ ವ್ಯಾಪ್ತಿಯಲ್ಲಿರುವ ಬೆಟ್ಟದಹೊಸೂರು ಗ್ರಾಮದ ಜಾಗತೀಕರಣ ಹಾಗೂ ಆಧುನಿಕ ಯುಗದಲ್ಲೂ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ ಕತ್ತಲಿನಲ್ಲಿದೆ. ಮೂವತ್ತು ದಿನಗಳಿಂದಲೂ ವಿದ್ತುತ್ ಸಂಪರ್ಕ ಗ್ರಾಮಕ್ಕೆ ಕಡಿತಗೊಂಡಿದ್ದರೂ ಇದರ ಬಗ್ಗೆ ಸೆಸ್ಕ್ ಇಲಾಖೆಯ ಬೇಜವಬ್ದಾರಿತನವನ್ನೇ ಪ್ರದರ್ಶಿಸುತ್ತಿದ್ದಾರೆ. ವಿದ್ಯುತ್ ಬೆಳಕು ಇಲ್ಲದೇ ಗ್ರಾಮದ ಜನರು ಕತ್ತಲಿನಲ್ಲೇ ಬದುಕುವಂತಾಗಿದೆ. ಕೆಲವರು ಬೆಳೆಗೆ ಪ್ರತ್ಯೇಕವಾಗಿ ಟಿಸಿ ಅಳವಡಿಸಿಕೊಳ್ಳದೇ ಗ್ರಾಮದ ಟಿಸಿಯ ಮೂಲಕವೇ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆದುಕೊಂಡದ್ದರಿಂದ ಟ್ರಾನ್ಸ್‌ಫಾರಂ ಸುಟ್ಟು ಹೋಗಿದೆ. ಒಂದು ತಿಂಗಳ ಹಿಂದೆ ಸುಟ್ಟು ಹೋಗಿರುವ ಟ್ರಾನ್ಸ್‌ಣಪಾರಂ ಇನ್ನೂ ದುರಸ್ತಿಯಾಗಿಲ್ಲ. ವಿದ್ಯಾರ್ಥಿಗಳಿಗೆ ವರ್ಷದ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯುತ್ ಸರಬರಾಜು ಆಗದೇ ಗ್ರಾಮದ ಜನರಿಗೆ ಕುಡಿಯಲು ನೀರಿಗೂ ಸಮಸ್ಯೆಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ವಯಸ್ಸಾದ ವಣದ್ದರು ಮತ್ತು ಮಕ್ಕಳು ತಿರುಗಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಬೂಬು ಹೇಳುವುದನ್ನು ಕೈ ಬಿಟ್ಟು, ಸಮಸ್ಯೆಯನ್ನು ಸರಿಪಡಿಸದಿದ್ದರೆ ಸೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
 ಬೆಟ್ಟದಹೊಸೂರು ಗ್ರಾಮಸ್ಥರು



ನಿರ್ಗತಿಕರಿಗೆ ಮನೆ ನಿರ್ಮಿಸಿ
ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಅಲೆಮಾರಿಗಳ ನೆಲೆ ಏಕಲವ್ಯ ನಗರದಲ್ಲಿ ನೂರಾರು ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿವೆ. ದಿನಾಂಕ 06.03.2014 ರಂದು ಅಧಿಕವಾಗಿ ಬಿದ್ದ ಭಾರಿ ಮಳೆಯಿಂದ 60 ಗುಡಿಸಲು ನೆಲಸಮವಾಗಿ, ನಿರ್ಗತಿಕ ಕುಟುಂಬಗಳು ವಾಸ ಮಾಡಲು ಆಗದೆ ಬೀದಿಗೆ ಬಿದ್ದಿವೆ. ಈ ಬಗ್ಗೆ ಮೈಸೂರು ಜಿಲ್ಲಾ ದಸಂಸವು ತಹಸೀಲ್ದಾರ್ ಮತ್ತು ಕೊಳೆಗೇರಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಾಸಿಸಲು ನೆಲೆ ಇಲ್ಲದೆ ಸುಮಾರು 60 ಕುಟುಂಬಗಳು ಬೀದಿಯಲ್ಲಿ ಮಲಗುವ ಸ್ಥಿತಿಯಲ್ಲಿದ್ದರೂ ಜಿಲ್ಲಾಡಳಿತ ಈ ನಿರ್ಗತಿಕರಿಗೆ ಯಾವುದೇ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸುತ್ತಿವೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಈ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ ನಿರ್ಗತಿಕರ ಅತಂತ್ರ ಬದುಕನ್ನು ಸರಿ ಮಾಡಬೇಕೆಂದು ದಸಂಸವು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ.
 ವೈ. ಕುಮಾರ, ದಸಂಸ ಸಂಚಾಲಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement