ಮೈಸೂರು: ವಿವಿಧೆಡೆ ಜೆಡಿಎಸ್ ಅಭ್ಯರ್ಥಿ ಮತಯಾಚನೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಜೆಡಿಎಸ್ ಅಭ್ಯರ್ಥಿ ನ್ಯಾ. ಚಂದ್ರಶೇಖರಯ್ಯ ಭಾನುವಾರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಮತಯಾಚಿಸಿದರು.
ಬೆಳಗ್ಗೆ ಮಹಾತ್ಮಗಾಂಧಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಗೆ ತೆರಳಿ ವ್ಯಾಪಾರಸ್ಥರು ಹಾಗೂ ಗ್ರಾಹಕರನ್ನು ಭೇಟಿಯಾದರು. ತಾವು ಜೆಡಿಎಸ್‌ನಿಂದ ಸ್ಪರ್ಧಿಸಿದ್ದು ಈ ಬಾರಿ ತಮಗೆ ಮತ ನೀಡುವಂತೆ ಕೋರಿದರು.
ನಂತರ ಅಗ್ರಹಾರ, ನಂಜುಮಳಿಗೆ, ಜಯನಗರ, ಅಶೋಕಪುರಂ, ಕುವೆಂಪುನಗರ, ಶ್ರೀರಾಂಪುರ, ದೇವಯ್ಯನಹುಂಡಿ, ಚಿಕ್ಕಹರದನಹಳ್ಳಿಯಲ್ಲಿ ಪಾದಯಾತ್ರೆ ನಡೆಸಿದರು.
ಮತಯಾಚನೆ ಸಂದರ್ಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷೆ ಪಿ.ಎಸ್. ಸುಜಾತ ದುರ್ಗೇಶ್, ಉಪ ಮೇಯರ್ ವಿ. ಶೈಲೇಂದ್ರ, ನಗರಾಧ್ಯಕ್ಷ ರಾಜಣ್ಣ, ಬಂಗಾರಪ್ಪ ಬ್ಲಾಕ್ ಅಧ್ಯಕ್ಷೆ ತೇಜಮಣಿ, ವಕ್ತಾರ ಎಸ್‌ಬಿಎಂ ಮಂಜು, ಎಂ. ಸರೋಜಮ್ಮ ಮತ್ತಿತರರು ಇದ್ದರು.