ಆಕಾಶವಾಣಿ ಸಂಗೀತ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 2
ಮೈಸೂರಿನ ಪ್ರಸಾರ ಭಾರತಿಯು 2013ನೇ ಸಾಲಿನ ಆಕಾಶವಾಣಿ ವಾರ್ಷಿಕ ಸಂಗೀತ ಸ್ಪರ್ಧೆ ವಿಜೇತರಿಗೆ ಮಂಗಳವಾರ ಬಹುಮಾನ ವಿತರಿಸಿತು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಆರ್.ಎನ್. ಶ್ರೀಲತಾ ಅವರು ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಶ್ರೀಲತಾ ಅವರು, ಯುವ ಸಂಗೀತಗಾರರಿಗೆ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸುವ ಜೊತೆಗೆ, ಅವರ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲ ಆಗುವಂತೆ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ. ಆಕಾಶವಾಣಿಯಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿಬರುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.
ನಾಗಸ್ವರದಲ್ಲಿ ಪ್ರಥಮ ಬಹುಮಾನ ಗಳಿಸಿದ ಚೆನ್ನೈನ ಎಚ್.ಹೇಮರಾಜ್, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಬೆಂಗಳೂರಿನ ಜಿ.ಕೆ.ಯೋಗಕೀರ್ತನಾ, ಮೃದಂಗದಲ್ಲಿ ತಿರುವನಂತಪುರಂನ ಎ.ಜಿ. ಜಯಕೃಷ್ಣನ್, ವೈಲಿನ್‌ನಲ್ಲಿ ತ್ರಿಚೂರ್‌ನ ಕೆ.ಎಂ. ಶ್ರೀರಾಮ್, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಮಧುರೈನ ಎನ್.ಶಿವಗಣೇಶ್, ತವಿಲ್‌ನಲ್ಲಿ ಚೆನ್ನೈನ ವಟತೂರ್ ವಿ.ಮಣಿಕಂಠನ್, ಭಕ್ತಿಗೀತೆಗಳ ಗಾಯನದಲ್ಲಿ ತಿರುವನಂತಪುರಂನ ಚಾರು ಹರಿಹರನ್, ಸುಗಮ ಸಂಗೀತದಲ್ಲಿ ಪ್ರಥಮ ಬಹುಮಾನಗಳಿಸಿದ ಕ್ಯಾಲಿಕಟ್‌ನ ಕೆ.ಕೆ. ಸೂರ್ಯಶಾಮ್ ಗೋಪಾಲ್ ಮತ್ತು ಮಂಗಳೂರಿನ ಶರಧಿ ಪಾಟೀಲ್ ಅವರಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ಬಹುಮಾನ ವಿಜೇತರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.