ತೆರೆದಿಟ್ಟ ಮಾಂಸ ಮಾರಬೇಡಿ
ಕ.ಪ್ರ.ವಾರ್ತೆ ಮೈಸೂರು ಮೇ 1
ನಗರ ಮತ್ತು ಜಿಲ್ಲೆಯಲ್ಲಿ ಮಾಂಸವನ್ನು ತೆರೆದ ರೀತಿಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಈ ಮಾಂಸ ಉಪಯೋಗಿಸಿದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006 ಅಡಿಯಲ್ಲಿ ತೆರೆದ ರೀತಿಯಲ್ಲಿ ಮಾಂಸ ಮಾರಾಟ ಮಾಡುತ್ತಿರುವ ಅಂಗಡಿಗಳು ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಇದರ ಜೊತೆಗೆ ನಿಯಮಾನುಸಾರ ದಂಡ ವಿಧಿಸಲು ಆಹಾರ ಸುರಕ್ಷತೆ ಆಯುಕ್ತರು ಆದೇಶಿಸಿರುತ್ತಾರೆ. ಮಾಂಸ ಮಾರಾಟಗಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ನಿಯಮಗಳು ಷಡ್ಯೋಲ್- 4 ವಿಭಾಗ 4ರಂತೆ ಮಾಂಸ ಮಾರಾಟ ಮಾಡಲು ಸೂಚಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಆಹಾರ ಸುರಕ್ಷತಾ ಪರವಾನಗಿ, ನೋಂದಣಿ ಪತ್ರವನ್ನು ಮಾಂಸ ಮಾರಾಟಗಾರರು ಪಡೆದು, ಈ ಪತ್ರವನ್ನು ಮಳಿಗೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವುದು ಕಡ್ಡಾಯ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.