ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾನಾ ವಸತಿ ಶಾಲೆಗಳಿಗೆ ಪ್ರವೇಶಾರಂಭ

Vishwanath S
Updated On : 4 May 2014, 1:21 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 3
ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಮಾದರಿ ವಸತಿ ಶಾಲೆಗಳ 6ನೇ ತರಗತಿಗೆ ಶನಿವಾರ ಪ್ರವೇಶಾತಿ ಆರಂಭವಾಯಿತು.
ಜಿಲ್ಲಾದ್ಯಂತ 16 ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಹಾಗೂ 6 ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಆಂಗ್ಲ ಮಾಧ್ಯಮ ವಸತಿ ಶಾಲೆಗಳಿವೆ. ಕಳೆದ ವರ್ಷದಲ್ಲಿ 5ನೇ ತರಗತಿ ಪರೀಕ್ಷೆ ಬರೆದಿರುವವರಿಗೆ 6ನೇ ತರಗತಿಗೆ ಪ್ರವೇಶ ನೀಡಲು ಮಾ.23ರಂದು ಸಿಇಟಿ ನಡೆಸಲಾಗಿತ್ತು. ಏ.7ರಂದು ಪ್ರಕಟಗೊಂಡ ಫಲಿತಾಂಶವನ್ನು ಆಧರಿಸಿ ನಿಗದಿತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗರದ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆಯ ನಗರ ಸೇರಿದಂತೆ ಎಲ್ಲಾ ಏಳು ತಾಲೂಕುಗಳಿಂದ ಒಟ್ಟು 1100 ಮಂದಿ ನಿಗದಿತ ಅಂಕ ಗಳಿಸಿ ಪ್ರವೇಶಾತಿ ಪಡೆಯಲು ಅರ್ಹರಾಗಿದ್ದಾರೆ.
ಅವರಲ್ಲಿ ಮೊದಲ ದಿನ 522 ಮಂದಿ, ಮೇ 4ರಂದು 500 ಮಂದಿ ಹಾಗೂ ಮೇ 5 ಉಳಿದವರಿಗೆ ಕೌನ್ಸೆಲಿಂಗ್ ನಡೆಸಿ ಪ್ರವೇಶಾತಿ ನೀಡಲಾಗುತ್ತದೆ. ಶನಿವಾರದಂದು ಅಂಗವಿಕಲರು, ವಿಧವಾ ಮಕ್ಕಳು, ಪ್ರಾಮಾಣೀಕೃತ ಬಾಲ ಕಾರ್ಮಿಕರು, ಅನಾಥ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಸಾಮಾನ್ಯ ವರ್ಗಕ್ಕೆ ಸೇರಿದವರು ಹಾಗೂ ಪರಿಶಿಷ್ಟ ಜಾತಿ ಮಕ್ಕಳು ಹಾಜರಾಗಿದ್ದರು.
ಉಳಿದಂತೆ ಮೇ 4ರಂದು ಪರಿಶಿಷ್ಟ ವರ್ಗ, ಪ್ರವರ್ಗ- 1, 2ಎ, 2ಬಿ, 3ಎ ವರ್ಗಕ್ಕೆ ಸೇರಿದವರು ಹಾಗೂ ಮೇ 5ರಂದು ಹೆಚ್ಚುವರಿ ಪಟ್ಟಿಯಲ್ಲಿನ ವಿಶೇಷ ವರ್ಗಗಳ ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಶಾಲೆಗಳಲ್ಲಿರುವ ಸೌಲಭ್ಯ: ರಾಜ್ಯಾದ್ಯಂತ ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 6 ರಿಂದ 12ನೇ ತರಗತಿವರೆಗೆ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ. ಇದರಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement