ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಸ್ ಪ್ರಯಾಣ ದರ ಹೆಚ್ಚಳ ಎಷ್ಟು?

Vishwanath S
Updated On : 5 May 2014, 12:51 pm

ಕ.ಪ್ರ.ವಾರ್ತೆ , ಮೈಸೂರು , ಮೇ 4
ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಸಾಮಾನ್ಯ ಮತ್ತು ವೇಗದೂತ ಬಸ್ ಪ್ರಯಾಣ ದರವು ಹೆಚ್ಚಳವಾಗಿದೆ. ಪ್ರೀಮಿಯರ್ ಸೇವೆಗಳಾದ ರಾಜಹಂಸ ಮತ್ತು ವೋಲ್ವೋ ಬಸ್ ದರದಲ್ಲಿ ಹೆಚ್ಚಳ ಆಗಿಲ್ಲ. ಬಿಳಿಕೆರೆ, ಟಿ. ನರಸೀಪುರ ಮತ್ತು ಗದ್ದಿಗೆ ಮಾರ್ಗದ ಸಾಮಾನ್ಯ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಉಳಿದಂತೆ ಎಲ್ಲ ವೇಗದೂತ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ನಗರದಲ್ಲೂ ಏರಿಕೆ: ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ವಿಭಾಗವು ಸಹ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಿದೆ. ಬಸ್ ನಿಲ್ದಾಣದಿಂದ ಮೊದಲ ಹಂತದವರೆಗೆ ಹಳೆಯ ಪ್ರಯಾಣ ದರವನ್ನು ಮುಂದುವರೆಸಲಾಗಿದೆ. ನಂತರ ಹಂತಗಳಿಗೆ 2 ಹೆಚ್ಚಿಸಲಾಗಿದೆ. ಉದಾಹರಣೆಗೆ ಪ್ರಯಾಣಿಕರು ತಮ್ಮ ಬಡಾವಣೆಗಳಿಗೆ ತಲುಪಲು ಈವರೆಗೂ 13 ಪಾವತಿಸುತ್ತಿದ್ದರೇ ಇನ್ನೂ ಮುಂದೆ 15 ಪಾವತಿಸಬೇಕಾಗುತ್ತದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ ತಿಳಿಸಿದರು.
ಮೈಸೂರಿನಿಂದ ವಿವಿಧ ಪ್ರದೇಶಗಳಿಗೆ ವೇಗದೂತ ದರ (ಗಳಲ್ಲಿ)
ಊರು    ಹಳೆ    ಹೊಸ
ನಂಜನಗೂಡು    25    30
ಬಿಳಿಕೆರೆ    23    26
ಟಿ. ನರಸೀಪುರ    25    28
ಹುಣಸೂರು    40    45
ಕೆ.ಆರ್. ನಗರ    40    45
ಮಳವಳ್ಳಿ    40    45
ಮಂಡ್ಯ    40    45
ಗದ್ದಿಗೆ    28    31
ಎಚ್.ಡಿ. ಕೋಟೆ    45    50
ಸರಗೂರು    45    50
ಕೆ.ಆರ್.ಪೇಟೆ    50    55
ಗುಂಡ್ಲುಪೇಟೆ    55    60
ಚಾಮರಾಜನಗರ    55    60
ನಾಗಮಂಗಲ    66    72
ಚನ್ನರಾಯನಪಟ್ಟಣ    77    84
ಕುಶಾಲನಗರ    77    84
ರಾಮನಗರ    83    90
ಗೋಣಿಕೊಪ್ಪ    83    90
ವಿರಾಜಪೇಟೆ    101    109
ಹಾಸನ    106    115
ಮಡಿಕೇರಿ    106    115
ಬೆಂಗಳೂರು    116    126
ಅರಸೀಕೆರೆ    121    133
ಕೆಬಿಎಸ್    121    133
ತುಮಕೂರು    144    155
ಶಿವಮೊಗ್ಗ    221    239
ಮಂಗಳೂರು    227    244
ಹರಿಹರ    292    316
ಹುಬ್ಬಳ್ಳಿ    420    439
ಗದಗ    436    457
ಬೆಳಗಾವಿ    444    481
ದಾವಣಗೆರೆ    303    333
ಬಿಜಾಪುರ    623    680
ಮೈಸೂರಿನಿಂದ ಹೊರ ರಾಜ್ಯ
ರಾಜಹಂಸ, ವೋಲ್ವೋ ಬಸ್ ದರ ಯಥಾಸ್ಥಿತಿ
13 ಪಾವತಿಸುತ್ತಿದ್ದರೆ ಇನ್ನೂ 15 ಪಾವತಿಸಿ
                 ಹಿಂದೆ    ಈಗ
ಊಟಿ                 125    131
ಕೊಯಮುತ್ತೂರು          145    152
ತಲಚೇರಿ                 161    176
ಮಾನಂದವಾಡಿ    105    111
ಕೋಲ್ಕತಾ                 168    174
ಈರೋಡ್                 144    150
ತಿರುಪುರ್                  144    150
ಪಯ್ಯನೂರ್                 176    185
ಪಣಜಿ                527    562
ಕಣ್ಣೂರ್                160    176
ಬಿಜೆಪಿ ಪ್ರತಿಭಟನೆ ಇಂದು
ಮೈಸೂರು: ಬಸ್ ಪ್ರಯಾಣ ದರ ಹೆಚ್ಚಳ ಹಾಗೂ ನರೇಂದ್ರ ಮೋದಿ ಅವರ ಹತ್ಯೆ ಸಂಚು ಖಂಡಿಸಿ ಮೇ 5ರಂದು ಬೆಳಗ್ಗೆ 10.30ಕ್ಕೆ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಇ. ಮಾರುತಿರಾವ್ ಪವಾರ್ ತಿಳಿಸಿದ್ದಾರೆ. ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಮೇ 5ರ ಬೆಳಗ್ಗೆ 11ಕ್ಕೆ ನಗರ ಬಸ್ ನಿಲ್ದಾಣ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ತಿಳಿಸಿದ್ದಾರೆ.
ನಾಳೆ ಡಿಸಿ ಕಚೇರಿ ಎದುರು ರೈತರ ಧರಣಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಇಲಾಖೆಯ ಕಚೇರಿಗಳು ನಿಷ್ಕ್ರಿಯವಾಗಿವೆ. ಜಿಲ್ಲಾಡಳಿತವನ್ನು ಬಡಿದೆಬ್ಬಿಸುವ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಲುವಾಗಿ ರಾಜ್ಯ ರೈತ ಸಂಘವು ಹಾಗೂ ಹಸಿರು ಸೇನೆಯು ಮೇ 6ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಧರಣಿಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ರೈತರು, ರೈತ ಮುಖಂಡರು ಭಾಗವಹಿಸುವಂತೆ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement