ಮಾಹಿತಿ ನೀಡದ ಅಧಿಕಾರಿ ವಿರುದ್ಧ ದೂರು
ಮೈಸೂರು: ಆರ್ಟಿಐನಡಿ ಅರ್ಜಿ ಸಲ್ಲಿಸಿ 69 ದಿನಗಳು ಕಳೆದರೂ ಮಾಹಿತಿ ನೀಡದ ಪಾಲಿಕೆ ವಲಯ ಕಚೇರಿ 2ರ ಸಹಾಯಕ ಆಯುಕ್ತ ಕೆ.ಎನ್. ರಾಮಚಂದ್ರ ವಿರುದ್ಧ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ನೀಡಿದೆ.
ಅಶೋಕಪುರಂನಲ್ಲಿರುವ ವಿವಿಧ ದೇವಸ್ಥಾನಗಳ ಕರ ಪಾವತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು, ಸದರಿ ದೇವಸ್ಥಾನಗಳಿಗೆ ಸಂಬಂಧಿಸಿದ ಕಂದಾಯ ರಸೀದಿ, ಕರ ಪಾವತಿ ರಿಯಾಯಿತಿಗೆ ಸಾಕ್ಷ್ಯಾಧಾರ, ಕಂದಾಯ ನಕಲು ಪ್ರತಿ, ದೇವಸ್ಥಾನಗಳ ಸುತ್ತಳತೆ ವಿವರ ಮತ್ತು ನಕ್ಷೆ ಹಾಗೂ ಇತರೆ ದಾಖಲೆಗಳನ್ನು ನೀಡುವಂತೆ ಆರ್ಟಿಐನಡಿ ಅರ್ಜಿ ಸಲ್ಲಿಸಿದ್ದೆವು.
ಈ ಬಗ್ಗೆ ಯಾವುದೇ ಉತ್ತರ ನೀಡದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾಸಂಸ್ಥೆಯ ಅಧ್ಯಕ್ಷ ಸಿ. ಚಿದಂಬರ ಒತ್ತಾಯಿಸಿದ್ದಾರೆ.