ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉದಯಗಿರಿ ಎಎಸ್‌ಐ ಅಮಾನತು

Rashmi Kasaragodu
Updated On : 9 May 2014, 12:24 pm

ಮೈಸೂರು: ಪೇದೆಗಳ ನೇಮಕಾತಿಯಲ್ಲಿ ತಮ್ಮ ಸಂಬಂಧಿಕ ಪರ ಶಿಫಾರಸು ಮಾಡುತ್ತಿದ್ದ ಉದಯಗಿರಿ ಠಾಣೆಯ ಎಎಸ್‌ಐ ಸೈಯ್ಯದ್ ಅಲಿ ಶಾ ಅವರನ್ನು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ ಅಮಾನತುಗೊಳಿಸಿದ್ದಾರೆ.
ನಗರ ಪೊಲೀಸ್ ಘಟಕದ ಪೇದೆಗಳ ನೇಮಕಾತಿಗಾಗಿ ಸಿಎಆರ್ ಮೈದಾನದಲ್ಲಿ ಬುಧವಾರ ಸಹ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಸಮವಸ್ತ್ರದಲ್ಲಿ ಆಗಮಿಸಿದ ಎಎಸ್‌ಐ ಸೈಯ್ಯದ್ ಅಲಿ ಶಾ, ನೇಮಕಾತಿ ಕೆಲಸದಲ್ಲಿ ತೊಡಗಿದ್ದ ತಮ್ಮ ಕೆಳಗಿನ ಹಂತದ ಸಿಬ್ಬಂದಿ ಮೇಲೆ ತಮ್ಮ ಸಂಬಂಧಿ ಯುವಕನಿಗೆ ಆದ್ಯತೆ ನೀಡುವಂತೆ ಒತ್ತಡ ಹೇರಿದ್ದಾರೆ.
ನೇಮಕಾತಿ ಸಮಿತಿ ಅಧ್ಯಕ್ಷರಾದ ಡಿಸಿಪಿ ಎ.ಎನ್.ರಾಜಣ್ಣ ಅವರು ಸೈಯ್ಯದ್ ಅಲಿ ಶಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಸೈಯ್ಯದ್ ಅಲಿ ಶಾ ಅವರನ್ನು ಡಿಸಿಪಿ ರಾಜಣ್ಣ ಅವರು ಸ್ಥಳದಲ್ಲೇ ಅಮಾನತುಗೊಳಿಸಿ ಆದೇಶಿಸಿದ್ದಾರೆ.



ಡಾ. ರಾಜ್‌ಕುಮಾರ್ ಸೇವಾ ಪ್ರಶಸ್ತಿಗೆ ಆಯ್ಕೆ
ಮೈಸೂರು: ನಗರದ ವಕೀಲ ಹಾಗೂ ಗಾಯಕ ಕೆ.ವಿ. ವಾಸು ಅವರಿಗೆ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕವು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಅವರ ಸಾಧನೆ ಪರಿಗಣಿಸಿ ಡಾ.ರಾಜ್‌ಕುಮಾರ್ ಸೇವಾ ಪ್ರಶಸ್ತಿ 2014 ನೀಡಿದೆ. ಇತ್ತೀಚೆಗೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement