ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕನ್ನಡ ಕಡ್ಡಾಯವಲ್ಲ ತೀರ್ಪಿಗೆ ವಿರೋಧ

Rashmi Kasaragodu
Updated On : 9 May 2014, 12:22 pm

ಮೈಸೂರು: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಸಾಹಿತಿ ಹಾಗೂ ಚಳವಳಿಗಾರರು ಗುರುವಾರ ಪ್ರತಿಭಟಿಸಿದರು.
ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಪ.ಮಲ್ಲೇಶ್ ನೇತೃತ್ವದಲ್ಲಿ ಕೆ.ಆರ್. ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನ್ಯಾಯಾಲಯದ ತೀರ್ಪು ಖಂಡಿಸಿದರಲ್ಲದೆ, ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೂ ಮುನ್ನ ಮಳೆ ಆರಂಭವಾಗಿದ್ದರಿಂದ ಮೊದಲೇ ನಿಗದಿಯಾದಂತೆ ಮಾನವ ಸರಪಳಿ ನಿರ್ಮಿಸಲು ಅಡ್ಡಿ ಉಂಟಾಯಿತು. ಅಲ್ಲದೆ ಕೆ.ಆರ್. ವೃತ್ತವು ನಿಷೇಧಿತ ಪ್ರದೇಶವಾಗಿರುವುದರಿಂದ ಚಳವಳಿ ನಡೆಸಲು ಪೊಲೀಸರು ಅನುಮತಿ ನೀಡದ ಕಾರಣ ಪ್ರತಿಭಟನೆಯನ್ನು ಸಾಂಕೇತಿಕವಾಗಿ ನಡೆಸಿ ಕೆಲವೇ ನಿಮಿಷದಲ್ಲಿ ಅಂತ್ಯಗೊಳಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ಎಂ.ಬಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ, ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ, ಕೊ.ಸು. ನರಸಿಂಹಮೂರ್ತಿ, ಸಾಹಿತಿಗಳಾದ ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಕೆ.ಎಸ್. ಭಗವಾನ್, ಪ್ರೊ.ಸಿದ್ಧಾಶ್ರಮ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಕನ್ನಡ ಚಳವಳಿಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಬಿ.ಎ. ಶಿವಶಂಕರ್, ಬೋಗಾದಿ ಸಿದ್ದೇಗೌಡ, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್‌ಕುಮಾರ್‌ಗೌಡ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಕಾರ್ಯದರ್ಶಿ ನಾಲಾಬೀದಿ ರವಿ, ಎಸ್‌ಟಿಪಿಐನ ಪ್ರೊ.ಶಬ್ಬೀರ್ ಮುಸ್ತಾಪ, ಪ್ರಕಾಶಕ ಡಿ.ಎನ್. ಲೋಕಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಿವರಾಮ್, ರಂಗಕರ್ಮಿ ಕೆ. ಮುದ್ದುಕೃಷ್ಣ, ಗಾಯಕ ಪ್ರೊ.ಸೋಮಶೇಖರಪ್ಪ, ಜೆಡಿಎಸ್ ಕೃಷ್ಣರಾಜ ಬ್ಲಾಕ್ ಅಧ್ಯಕ್ಷ ಎಂ. ಬಸವರಾಜು, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೇವಲ ಕನ್ನಡ ಭಾಷೆಗೆ ಮಾತ್ರವೇ ಧಕ್ಕೆಯಲ್ಲ. ಭಾರತದ ಒಕ್ಕೂಟ ವ್ಯವಸ್ಥೆಗೂ ಮಾರಕವಾಗಿದೆ. ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯೇ ಮಾಧ್ಯಮವಾಗಬೇಕು. ಆಯಾ ರಾಜ್ಯದಲ್ಲಿ ಮಾತೃಭಾಷೆ ಕಲಿಯದೇ ಬೇರೆಲ್ಲಿ ಕಲಿಯಲು ಸಾಧ್ಯ. ಮಾತೃಭಾಷೆಯ ಶಿಕ್ಷಣದ ಕುರಿತಾಗಿ ತಮಿಳುನಾಡು ಮತ್ತು ಮಹಾರಾಷ್ಟ್ರದ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸಬೇಕು. ಈ ಹೋರಾಟಕ್ಕೆ ರೈತ ಸಂಘವೂ ಸಂಪೂರ್ಣ ಬೆಂಬಲ ನೀಡಲಿದೆ.
ಟಿ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರಾತ ಸಂಘ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement