ಪಿಯು ಫಲಿತಾಂಶ: ಹಲವು ಕಾಲೇಜುಗಳ ಸಾಧನೆ
ಸದ್ವಿದ್ಯಾ: ಶೇ.95 ಫಲಿತಾಂಶ
ಮೈಸೂರು: ನಗರದ ಸದ್ವಿದ್ಯಾ ಸಂಯುಕ್ತ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.95.26 ಫಲಿತಾಂಶ ಬಂದಿದೆ. 486 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 463 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 207 ಮಂದಿ ಉನ್ನತ ಶ್ರೇಣಿ, 239 ಮಂದಿ ಪ್ರಥನ, 16 ಮಂದಿ ದ್ವಿತೀಯ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಭೌತಶಾಸ್ತ್ರದಲ್ಲಿ 18, ರಸಾಯನಶಾಸ್ತ್ರ 16, ಗಣಿತ 36, ಜೀವಶಾಸ್ತ್ರ 5, ಎಲೆಕ್ಟ್ರಾನಿಕ್ಸ್ 5, ಗಣಕವಿಜ್ಞಾನ 3, ಲೆಕ್ಕಶಾಸ್ತ್ರ 5, ಸಂಖ್ಯಾಶಾಸ್ತ್ರ 1, ಕನ್ನಡ 1 ಹಾಗೂ ಸಂಸ್ಕೃತದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಇದರಲ್ಲಿ ಡಿ.ವಸುಧಾ (594) ರಾಜ್ಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ಮನೀಷ್‌ಕುಮಾರ್ (587), ಎಂ.ಪವನ್ (587), ಎಚ್.ಎ. ಅಮೃತಾ (587), ಆರ್. ಅಕ್ಷತಾ (585), ಬಿ.ಎಂ. ವಿಜಯ್ (585), ಎಂ.ಪಿ. ಅಪೂರ್ವ (584), ಬಿ.ಎಸ್. ಚೇತನ್‌ಗೌಡ (582), ಪಿ.ಎಸ್. ಶ್ರೇಯಸ್ (581), ಸಿದ್ದಾಂತ್ ಎಸ್. ದರಿರಾ (581) ಹೆಚ್ಚಿನ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಜೆಎಸ್‌ಎಸ್ ಮಹಿಳಾ ಕಾಲೇಜು
ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಆರ್.ಧನಲಕ್ಷ್ಮಿ (566), ವಾಣಿಜ್ಯ ವಿಭಾಗದಲ್ಲಿ ನಿಶಾ ಜೈನ್ (574), ವಿಜ್ಞಾನ ವಿಭಾಗದಲ್ಲಿ ಬಿ.ಪಿ. ಮೇಘನಾ (559) ಅವರು ಅಧಿಕ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.
ಮರಿಮಲ್ಲಪ್ಪ ಸಾಧನೆ
ಮರಿಮಲ್ಲಪ್ಪ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.94 ಫಲಿತಾಂಶ ಬಂದಿದೆ. 330 ವಿದ್ಯಾರ್ಥಿಗಳು ಉನ್ನತ, 431 ಮಂದಿ ಪ್ರಥಮ, 48 ಮಂದಿ ದ್ವಿತೀಯ ಹಾಗೂ 9 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆರ್.ಅಭಿಜಿತ್, ಎಂ.ದೀಪಿಕಾ, ಸಿ.ಪವನ್ ಮತ್ತು ಸಿಂಧು ಎಸ್. ರಾವ್ ಅವರು ತಲಾ 585 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎನ್.ಸಾಗರ್ 583, ಕಲಾ ವಿಭಾಗದಲ್ಲಿ ಬಿ. ಮಹೇಂದ್ರ 557 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ರಕ್ಷಿತಾಗೆ ಉನ್ನತ ಶ್ರೇಣಿ
ಗೋಪಾಲಸ್ವಾಮಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಂ.ರಕ್ಷಿತಾ ಅವರು ವಿಜ್ಞಾನ ವಿಭಾಗದಲ್ಲಿ 576 ಅಂಕ ಪಡೆದು ಕಾಲೇಜಿವಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ರಕ್ಷಿತಾ ಅವರನ್ನು ಕಾಲೇಜಿನ ಪ್ರತಿನಿಧಿ ಎನ್.ಆರ್. ಮಂಜುನಾಥ್, ಪ್ರಾಂಶುಪಾಲ ಸುರೇಶ್ ಯಡಿಯಾಲ್, ಶೈಕ್ಷಣಿಕ ಸಲಹೆಗಾರ ಪ್ರೊ.ಟಿ.ಟಿ. ಥಾಮಸ್ ಅಭಿನಂದಿಸಿದರು. ರಕ್ಷಿತಾ ತಾಯಿ ಡಿ. ಇಂದಿರಾ ಇದ್ದರು.
ಸೃಷ್ಟಿಭಾಮಗೆ ಉನ್ನತ ಶ್ರೇಣಿ
ಮರಿಮಲ್ಲಪ್ಪ ಪಿಯು ಕಾಲೇಜು ವಿದ್ಯಾರ್ಥಿನಿ ಹಾಗೂ ಜಿ.ಎಂ. ಮರಿಸ್ವಾಮಿ, ಎಂ.ಎಸ್. ಭಾರತಿ ಅವರ ಪುತ್ರಿ ಸೃಷ್ಟಿಭಾಮ ಅವರು 550 (ಶೇ.92) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕನ್ನಡದಲ್ಲಿ 83, ಇಂಗ್ಲಿಷ್ 86, ಭೌತಶಾಸ್ತ್ರ 92, ರಸಾಯನಶಾಸ್ತ್ರ 95, ಗಣಿತ 99, ಜೀವಶಾಸ್ತ್ರ 95 ಅಂಕ ಗಳಿಸಿದ್ದಾರೆ.
ಕೆ.ಪುಟ್ಟಸ್ವಾಮಿ ಕಾಲೇಜು
ಮೈಸೂರು: ಕೆ.ಪುಟ್ಟಸ್ವಾಮಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಒಟ್ಟು 127 ವಿದ್ಯಾರ್ಥಿಗಳ ಪೈಕಿ 13 ಮಂದಿ ಉನ್ನತ ಶ್ರೇಣಿಯಲ್ಲಿ, 80 ಮಂದಿ ಪ್ರಥಮ ದರ್ಜೆಯಲ್ಲಿ ಹಾಗೂ ಉಳಿದವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಎಂ.ಪಿ.ಪ್ರಗತಿ, ಕೆ.ಶ್ವೇತಾ, ಎಸ್.ಪಿ. ಮನೋಜ್‌ಗೌಡ, ಮನೀಷ್ ಜೆ.ಪುರೋಹಿತ್, ಸುಷ್ಮಾ ಎಂ.ತಿಲಾವೆ, ಎಸ್.ಸುಮನ್, ಡಿಂಪಲ್ ಸೋಲಂಕಿ, ಅರ್ಚನಾ, ಎಚ್.ವಿ. ಮೋನಿಕಾ, ಎನ್.ಕಿರಣ್, ಜಿ.ಅಮೃತವರ್ಷಿಣಿ, ವೈ.ವಿ. ಪ್ರಕೃತಿ ಮತ್ತು ಎಸ್.ಎಂ. ಶಿವಕುಮಾರ್ ಅವರು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಒಡನಾಡಿ ವಿದ್ಯಾರ್ಥಿಗಳು
ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ 5 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಎನ್.ಸರಸ್ವತಿ (510), ಕಲಾ ವಿಭಾಗದಲ್ಲಿ ಬಿ. ರತ್ನಾ (341), ಎಸ್. ಹೇಮಾ (396), ಜೆ. ನಿಶ್ಚಿಂತಾಶ್ರೀ (393) ಹಾಗೂ ವಾಣಿಜ್ಯ ವಿಭಾಗದಲ್ಲಿ ಗಣೇಶ (340) ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ.
ಕಲಭಾರತಿ ಶೇ.100
ಮೈಸೂರು ತಾಲೂಕಿನ ಇಲವಾಲದಲ್ಲಿರುವ ಕಲಾಭಾರತಿ ಸಂಯುಕ್ತ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಬಂದಿದೆ. ವಿನಾಯಕ (517), ಮಹದೇವ (511) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಶೇ.50 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಶೇ.35 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಶೇ.15 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ನಟರಾಜಗೆ ಶೇ.80 ಫಲಿತಾಂಶ
ನಗರದ ನಟರಾಜ ಮಹಿಳಾ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.80.69 ಫಲಿತಾಂಶ ಬಂದಿದೆ. 202 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 7 ಮಂದಿ ಉನ್ನತ ಶ್ರೇಣಿ, 87 ಮಂದಿ ಪ್ರಥಮ ದರ್ಜೆ, 46 ಮಂದಿ ದ್ವಿತೀಯ ದರ್ಜೆ ಹಾಗೂ 22 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಎಸ್.ಶಶಿಕಲಾ (545), ಪಿ.ವಿದ್ಯಾಶ್ರೀ (512), ವಾಣಿಜ್ಯ ವಿಭಾಗದಲ್ಲಿ ರೇಖಾ (538), ಬಿ. ನಿರ್ಮಲಾ (531), ಎಂ.ಎಸ್. ಐಶ್ವರ್ಯ (523), ಎಚ್.ಡಿ.ಜಗದಾಂಬ (522) ಹಾಗೂ ವಿಜ್ಞಾನ ವಿಭಾಗದಲ್ಲಿ ಬಿ.ಸಹನಾ (511) ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಕಾಲೇಜೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಶ್ರೀರಾಮಕೃಷ್ಣ ಕಾಲೇಜು
ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಗೆ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಬಂದಿದೆ. 54 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ 49 ಮಂದಿ ಉನ್ನತ ದರ್ಜೆ ಹಾಗೂ 5 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾರಿದ್ದಾರೆ. ಶಾಲೆಯಲ್ಲಿ ಆದಿತ್ಯಾ ಶ್ರೀಧರ (584) ಪ್ರಥಮ, ಜೆ.ರಂಜನ್ (583) ದ್ವಿತೀಯ, ಟಿ.ಎಸ್.ಪಿ. ಶ್ರೇಯಸ್ (579), ಮನು ಮಾರೆಗುಡ್ಡಿ (579) ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಭೌತಶಾಸ್ತ್ರದಲ್ಲಿ 4, ರಸಾಯನಶಾಸ್ತ್ರದಲ್ಲಿ 6, ಗಣಿತ 8, ಜೀವಶಾಸ್ತ್ರದಲ್ಲಿ 3, ಕಂಪ್ಯೂಟರ್ ವಿಜ್ಞಾನದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.
ಅನುಶ್ರೀಗೆ ಉನ್ನತ ಶ್ರೇಣಿ
ವಿದ್ಯಾಶ್ರಮ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಅನುಶ್ರೀ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 582 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಣಿತ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ತಲಾ 100 ಅಂಕ ಗಳಿಸಿರುವ ಅನುಶ್ರೀ, ಸರ್ಕಾರಿ ಮುದ್ರಣಾಲಯ ಹಿರಿಯ ಕರಡು ಪರೀಕ್ಷಕ ಕೆ. ನಾರಾಯಣ ಭಟ್, ಅಂಚೆ ಇಲಾಖೆಯ ಸಹಾಯಕಿ ಕೆ.ಭಾರತಿ ಅವರ ಪುತ್ರಿ.