ಬಾಗಿಲು ಒಡೆದು ಚಿನ್ನಾಭರಣ ಕಳವು
ಕೆ.ಆರ್. ನಗರ: ಕಿಟಕಿಯ ಮೂಲಕ ಮನೆಯ ಬಾಗಿಲಿನ ಚಿಲಕ ತೆಗೆದು ಚಿನ್ನ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಇತ್ತೀಚೆಗೆ ನಡೆದಿದೆ. ಬಡಾವಣೆಯ ನಿವಾಸಿ ನೌಷದ್ ಪಾಷ ಎಂಬವರಿಗೆ ಸೇರಿದ ಜಾಮಿಯಾ ಮಸೀದಿ ಪಕ್ಕದ ರಸ್ತೆಯಲ್ಲಿರುವ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಬೀರುವಿನಲ್ಲಿದ್ದ 15.130 ಗ್ರಾಂ ಮಾಂಗಲ್ಯ ಸರ, 18.060 ಗ್ರಾಂ ನೆಕ್ಲೆಸ್, 3.770 ಗ್ರಾಂ ಲಾಕೆಟ್, 2.610 ಗ್ರಾಂ ಉಂಗುರ, 40.020 ಗ್ರಾಂ ಮಾಂಗಲ್ಯ ಸರ, 15 ಗ್ರಾಂ ಕಿವಿಯ ಓಲೆ ಮತ್ತು ಟಾಪ್ ಮಂಟಲ್, 10 ಸಾವಿರ ನಗದು ದೋಚಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.