ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಯು ಫಲಿತಾಂಶ: ಹಲವು ಕಾಲೇಜುಗಳ ಸಾಧನೆ

Rashmi Kasaragodu
Updated On : 9 May 2014, 11:47 am

ಜೆಎಸ್ಎಸ್ ಕಾಲೇಜು
ಮೈಸೂರು: ಜೆ.ಪಿ. ನಗರದಲ್ಲಿರುವ ಜೆಎಸ್ಎಸ್ ಪಿಯು ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.82.43 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗಕ್ಕೆ ಶೇ.89, ವಾಣಿಜ್ಯ ವಿಭಾಗಕ್ಕೆ ಶೇ. 83 ಹಾಗೂ ವಿಜ್ಞಾನ ವಿಭಾಗಕ್ಕೆ ಶೇ.72 ರಷ್ಟು ಫಲಿತಾಂಶ ಲಭಿಸಿದೆ. ವಿದ್ಯಾರ್ಥಿಗಳಾದ ಎಸ್.ಮಮತಾ ಶೇ.89.83, ಎ.ಪಿ. ಕೃತಿಕಾ ಶೇ.88.5, ಎನ್. ಮನುಶ್ರೀ ಶೇ.86.83, ಎನ್.ಸುಷ್ಮಾ ಶೇ.86.33, ಭವಾನಿ ಶೇ.85.5, ಎಂ. ರವಿಕಿರಣ್ ಶೇ.89.83, ಎಂ.ಎಸ್. ಸಾಗರ್ ಶೇ.80 ಹಾಗೂ ಜಿ ಬಾಲಾಜಿ ಶೇ. 82.33 ರಷ್ಟು ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಮಹಿಳಾ ಕಾಲೇಜು: ಶೇ. 80
ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಪಿಯು ಕಾಲೇಜಿಗೆ ಶೇ.80 ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 604 ವಿದ್ಯಾರ್ಥಿನಿಯರಲ್ಲಿ 483 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ಆರ್. ಧನಲಕ್ಷ್ಮೀ 566, ವಾಣಿಜ್ಯ ವಿಭಾಗದ ನಿಶಾಜೈನ್ 574, ವಿಜ್ಞಾನ ವಿಭಾಗದಲ್ಲಿ ಬಿ.ಪಿ. ಮೇಘನಾ 559, ಸೋನಲ್ ಬೋರ 573, ಟಿ.ಪಿ. ಸುಭಾಷಿಣಿ 573 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಎಸ್ಡಿಎಂ ಕಾಲೇಜು
ಕೃಷ್ಣಮೂರ್ತಿಪುರಂನಲ್ಲಿರುವ ಎಸ್ಡಿಎಂ ಬಾಲಕಿಯರ ಪಿಯು ಕಾಲೇಜಿಗೆ ಶೇ.87 ರಷ್ಟು ಫಲಿತಾಂಶ ಲಭಿಸಿದ್ದು, 92 ವಿದ್ಯಾರ್ಥಿನಿಯರುಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ವಾಣಿಜ್ಯ ವಿಭಾಗದ ಬಿ. ಗಾಯತ್ರಿ ಶೇ. 93.33, ಇ. ಶ್ರೀಲಕ್ಷ್ಮೀ ಶೇ.93, ಆರ್. ನವ್ಯ ಶೇ. 93, ನೀತು ಸೇ. 92.66, ತೃಷಾಲ ಆರ್. ಟಾಗೋರ್ ಶೇ. 90.5 ಅಂಕ ಗಳಿಸಿದ್ದಾರೆ. ಹಾಗೆ ವಿಜ್ಞಾನ ವಿಭಾಗದ ಎಂ. ರಶ್ಮೀ ಶೇ. 95.83, ಹುಮೇರ ತಸ್ಲಿಮ ಶೇ. 94.5, ಎಸ್. ಲೇಖನ ಶೇ. 94.16, ಡಿ. ಮೇಘನ ಶೇ.93.16, ಪಿ. ನಿವೇದಿತಾ ಶೇ. 93, ಆಂಚಲ್ ಆರ್. ಜೈನ್ ಶೇ. 92.66, ಭಾರ್ಗವಿ ರಾಂಪೊಲೆ ಶೇ.92.66, ಎ.ಆರ್. ತೇಜಸ್ವಿನಿ ಶೇ. 92.66, ರೋಸ್ ಮೇರಿ ಸೆಬಸ್ಟೈನ್ ಶೇ. 92.5, ಎನ್. ಸಿಂಧು ಶೇ. 92.83, ಹರ್ಷಿತ ಡಿ ಅಯ್ಯಂಗಾರ್ ಶೇ. 92, ಬಿ. ಸೀಮಾ ಶೇ. 92, ಸುಲ್ತಾನ್ವಾರ್ ಶ್ರದ್ದಾರಾವ್ ಸಾಹೇಬ್ ಶೇ. 91.83 ಅಂಕ ಗಳಿಸಿದ್ದಾರೆ.
ಅಜಯ್ಗೆ 530 ಅಂಕ
ಮರಿಮಲ್ಲಪ್ಪ ಪಿಯು ಕಾಲೇಜಿನ ವಿಜ್ಞಾನವಿಭಾಗದ ಪಿ.ಅಜಯಕುಮಾರ್ ದ್ವಿತೀಯಪಿಯು ಪರೀಕ್ಷೆಯಲ್ಲಿ 530 ಅಂಕ ಗಳಿಸಿದ್ದಾರೆ. ಇವರು ಎಂ. ವೀರಭದ್ರಸ್ವಾಮಿ ಮತ್ತು ಶೈಲಜಾ ಅವರ ಪುತ್ರ.
ದೇವರಾಜ ಪಿಯು ಕಾಲೇಜು
ದೇವರಾಜ ಬಾಲಕಿಯರ ಸರ್ಕಾರಿಸ್ವತಂತ್ರ ಪಿಯು ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 67 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 181 ಮಂದಿಯಲ್ಲಿ 5 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 67 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದ ಎಸ್. ಅಶ್ವಿನಿ ಶೇ.90.33,ವಾಣಿಜ್ಯ ವಿಭಾಗದ ಎಸ್.ಸ್ನೇಹ ಶೇ.90, ಪಿ.ಶ್ರೀವಿದ್ಯಾ ಶೇ. 88.66, ಟಿ.ಎನ್. ಂಜನ ಶೇ. 85, ಕಲಾ ವಿಭಾಗದ ಎನ್. ರೋಜಾ ಶೇ. 87 ಅಂಕ ಗಳಿಸಿದ್ದಾರೆ.
ಕೌಟಿಲ್ಯ ವಿದ್ಯಾಲಯಕ್ಕೆ ಶೇ.90
ಕೌಟಿಲ್ಯ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿಭಾಗಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.90 ಫಲಿತಾಂಶ ಬಂದಿದೆ. ಇಬ್ಬರು ವಿದ್ಯಾರ್ಥಿಗಳು ಉನ್ನತ, 22 ಮಂದಿ ಪ್ರಥಮ ಹಾಗೂ ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ  ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಸ್.ಸಂತೋಷಿಣಿ (541), ವಿಜ್ಞಾನ ವಿಭಾಗದಲ್ಲಿ ಜಿ.ಆರ್.ಚೇತನ್ (537) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಜ್ಯೋತಿ ಸಿರ್ವಿ (509), ವಿಜ್ಞಾನ ವಿಭಾಗದ ಎಂ.ಎಲ್. ಸ್ವರೂಪ್ಕುಮಾರ್(503), ಪಿ.ಸಾಯಿಗೌತಮ್ ಕೃಷ್ಣರೆಡ್ಡಿ (502) ಮತ್ತು ಸುಶ್ಮಿತಾ ಸೇನ್ (497) ಕಾಲೇಜಿನ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement